Monday, November 23, 2026
HomeBelagaviಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ಸೈಬರ್ ವಂಚನೆ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಿನಲ್ಲಿ ಸೈಬರ್ ವಂಚನೆ

 

ಬೆಳಗಾವಿ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂಬ ಯೂಟ್ಯೂಬ್ ಜಾಹೀರಾತು ನಂಬಿದ ಹಿಂದವಾಡಿ ನಿವಾಸಿ ಕಿಶೋರ (60) ಎಂಬುವರು 21,93,999 ರೂ. ಕಳೆದುಕೊಂಡಿದ್ದಾರೆ. ಈ ಕುರಿತು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಜೂನ್ 20ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ಪ್ರಸಾರವಾಗಿದ್ದ ಷೇರು ಹೂಡಿಕೆ ಕುರಿತ ಜಾಹೀರಾತನ್ನು ಕಿಶೋರ ವೀಕ್ಷಿಸಿದ್ದರು. ಜಾಹೀರಾತಿನಲ್ಲಿದ್ದ ಲಿಂಕ್ ಮೂಲಕ ಹೆಸರು, ವಿಳಾಸ ದಾಖಲಿಸಿ ನೋಂದಣಿ ಮಾಡಿಕೊಂಡಿದ್ದರು. ಬಳಿಕ ಸಂದೀಪ ಶರ್ಮಾ ಎಂಬಾತ ಕರೆ ಮಾಡಿ ಅವರನ್ನು ಟೆಲಿಗ್ರಾಮ್ ಗುಂಪಿಗೆ ಸೇರಿಸಿದ್ದ
ನಂತರ ಪ್ರಿಯಾಂಶ ಶರ್ಮಾ ಎಂಬಾತ ಫೋನ್‌ಪೇ ಮೂಲಕ 22 ಸಾವಿರ ರೂ. ವರ್ಗಾಯಿಸಿಕೊಂಡಿದ್ದ. ಹೆಚ್ಚಿನ ಮೊತ್ತ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗಲಿದೆ ಎಂದು ನಂಬಿಸಿ, ವೆಬ್‌ಸೈಟ್ ಮೂಲಕ ಹಂತ ಹಂತವಾಗಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ಆದರೆ ಹೂಡಿಕೆ ಮಾಡಿದ ಹಣವನ್ನೂ ನೀಡದೆ, ಲಾಭವನ್ನೂ ಕೊಡದೆ ವಂಚಿಸಲಾಗಿದೆ ಎಂದು ಕಿಶೋರ ದೂರಿನಲ್ಲಿ ತಿಳಿಸಿದ್ದಾರೆ.
ಒಟ್ಟು 21,93,999 ವಂಚನೆಗೊಳಗಾಗಿರುವುದಾಗಿ ಅವರು ಆರೋಪಿಸಿದ್ದು, ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Total Views 57
RELATED ARTICLES

Most Popular

Recent Comments

KNN City News
Home
E-Paper