
ಬೆಳಗಾವಿ
ನಗರದ ಪ್ರತಿಷ್ಠಿತ ಕ್ಲಬ್, ಪಬ್ ಹಾಗೂ ಹೋಟೆಲ್ಗಳ ಮೇಲೆ ಬೆಳಗಾವಿ ನಗರ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಪರಿಶೀಲನೆ ವೇಳೆ ಕೆಲವು ಕ್ಲಬ್ಗಳಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿ ಚಟುವಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಕೆಲವೆಡೆ ಅಪ್ರಾಪ್ತ ವಯಸ್ಕರು ಪತ್ತೆಯಾಗಿದ್ದು, ನಿಗದಿತ ನಿಯಮಗಳನ್ನು ಪಾಲಿಸದೆ ಹಾಗೂ ಹೆಚ್ಚಿನ ಶಬ್ದದಲ್ಲಿ ಧ್ವನಿವರ್ಧಕಗಳನ್ನು ಬಳಸಿ ಕ್ಲಬ್ಗಳನ್ನು ನಡೆಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ನಿಯಮ ಉಲ್ಲಂಘನೆ ಕಂಡುಬಂದ ಕೆಲವು ಕ್ಲಬ್ ಮತ್ತು ಪಬ್ಗಳ ಚಟುವಟಿಕೆಗಳನ್ನು ಪೊಲೀಸರು ತಕ್ಷಣವೇ ಸ್ಥಗಿತಗೊಳಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಪ್ರಭಾವಿ ರಾಜಕಾರಣಿಗಳಿಗೆ ಸೇರಿದ ಕೆಲವು ಪ್ರತಿಷ್ಠಿತ ಕ್ಲಬ್ಗಳ ಮೇಲೆಯೂ ದಾಳಿ ನಡೆದಿರುವುದು ಗಮನ ಸೆಳೆದಿದೆ. ನಗರದ ಕ್ಲಬ್, ಪಬ್ ಹಾಗೂ ಹೋಟೆಲ್ಗಳಲ್ಲಿ ನಿಯಮ ಪಾಲನೆ ಖಚಿತಪಡಿಸುವ ನಿಟ್ಟಿನಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
