Thursday, November 19, 2026
HomeBelagaviರೈತರ ಪಾದಯಾತ್ರೆ ಬೆನ್ನಲೇ ಇಂದು ಬೆಳಗಾವಿಗೆ ಸಿಎಂ ಡಿಕೆಶಿ ಆಗಮನ

ರೈತರ ಪಾದಯಾತ್ರೆ ಬೆನ್ನಲೇ ಇಂದು ಬೆಳಗಾವಿಗೆ ಸಿಎಂ ಡಿಕೆಶಿ ಆಗಮನ

ಬೆಳಗಾವಿ
ಬೆಳಗಾವಿಯಲ್ಲಿ ರೈತರು ನಡೆಸಿದ ಕಬ್ಬಿಗೆ ಎಂಎಸ್ ಪಿ ದರ ನಿಗದಿ ಮಾಡುವ ಕುರಿತು ರೈತರು ನಡೆಸುತ್ತಿರುವ ಪಾದಯಾತ್ರೆ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಶನಿವಾರ ಮಧ್ಯಾಹ್ನ ಬೆಳಗಾವಿಗೆ ಆಗಮಿಸುತ್ತಿದ್ದಾರೆ.
ನಿನ್ನೆ ಸುವರ್ಣ ವಿಧಾನಸೌಧದ ಬಳಿಯ ಕಲ್ಯಾಣ ಮಂಟಪದಿಂದ ಹೊರಟಿರುವ ರೈತರ ಪಾದಯಾತ್ರೆ ಈಗಾಗಲೇ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಗೆ ತಲುಪಿದೆ. ರೈತರ ಪಾದಯಾತ್ರೆ ಕಿತ್ತೂರು ತಲುಪುವ ಮುನ್ನವೇ ಸಿಎಂ ಡಿ.ಕೆ.ಶಿವಕುಮಾರ ಅವರು ರೈತರನ್ನು ಭೇಟಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇಂದು ಮಧ್ಯಾಹ್ನ ಬೆಳಗಾವಿಗೆ ಆಗಮಿಸಲಿರುವ ಸಿಎಂ ಡಿ.ಕೆ.ಶಿವಕುಮಾರ ಅಧಿಕೃತ ಕಾರ್ಯಕ್ರಮ ಅವರ ವೇಳಾಪಟ್ಟಿಯಲ್ಲಿ ಇಲ್ಲ. ಆದರೆ ಇವತ್ತು ವಿಶೇಷ ವಿಮಾನ ಮೂಲಕ ಬೆಳಗಾವಿಗೆ ಆಮಿಸಲಿರುವ ಅವರು, ಇಂದೇ ರಾತ್ರಿ ತೆರಳಲಿದ್ದಾರೆ‌.

 

Total Views 83
RELATED ARTICLES

Most Popular

Recent Comments

KNN City News
Home
E-Paper