ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಗ್ರಾಹಕರ ವಿಶ್ವಾಸ ಗಳಿಸಿರುವ ಪ್ರೀತಿ ಸಿಲ್ಕ್ಸ್ ಸಂಸ್ಥೆಯ ನೂತನ ಫ್ಲ್ಯಾಗ್ಶಿಪ್ ಶೋರೂಮ್ ನವೆಂಬರ್ 1ರಂದು ಗೋಕುಲ್ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಪ್ರಮುಖರಾದ ಮಹೇಶ ಭಂಡಾರಿ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1961ರಲ್ಲಿ ಸುಮಾರು 800 ಚದರ ಅಡಿಯಲ್ಲಿ ಆರಂಭವಾದ ಸಂಸ್ಥೆ, ಗ್ರಾಹಕರ ಬೇಡಿಕೆಯಂತೆ 2003ರಲ್ಲಿ ದಾಜಿಬಾನ್ ಪೇಟೆಯಲ್ಲಿ ವಿಸ್ತರಣೆಗೊಂಡಿತು. ಇದೀಗ ಗೋಕುಲ್ ರಸ್ತೆಯಲ್ಲಿ ವಿಶಾಲವಾದ ನೂತನ ಶೋರೂಮ್ ಆರಂಭಿಸಲಾಗುತ್ತಿದೆ ಎಂದರು.
ಹೊಸ ಶೋರೂಮ್ನಲ್ಲಿ ರೇಷ್ಮೆ ಸೀರೆಗಳು, ವಧುವಿನ ಉಡುಪುಗಳು, ಡಿಸೈನರ್ ಸೀರೆಗಳು, ಲೆಹೆಂಗಾಗಳು, ಮಹಿಳೆಯರ ಹಾಗೂ ಪುರುಷರ ಉಡುಪುಗಳು, ಶೆರ್ವಾನಿ, ಸೂಟ್ಗಳು ಮತ್ತು ಬೆಳ್ಳಿ ಆಭರಣಗಳು ಲಭ್ಯವಿರಲಿವೆ. ಅಲ್ಲದೆ, ಕಸ್ಟಮ್ ಟೈಲರಿಂಗ್ ಸೌಲಭ್ಯವೂ ಇರಲಿದ್ದು, ಕುಟುಂಬದ ಎಲ್ಲ ಸದಸ್ಯರ ಶಾಪಿಂಗ್ಗೆ ಒಂದೇ ತಾಣವಾಗಲಿದೆ ಎಂದು ತಿಳಿಸಿದರು.
ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಗುಣಮಟ್ಟದ ಉತ್ಪನ್ನ ಹಾಗೂ ಉತ್ತಮ ಸೇವೆ ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಭಂಡಾರಿ ಹಾಗೂ ರಜತ್ ಭಂಡಾರಿ ಉಪಸ್ಥಿತರಿದ್ದರು.
