Monday, November 23, 2026
HomeBelagaviರೈತರಿಗೆ ನಬಾರ್ಡ್ ಸಾಲದಲ್ಲಿ ಇಳಿಕೆ, ಸಿದ್ದರಾಮಯ್ಯ ವ್ಯರ್ಥ ಆರೋಪ : ಸಚಿವ ಪ್ರಲ್ಹಾದ ಜೋಶಿ

ರೈತರಿಗೆ ನಬಾರ್ಡ್ ಸಾಲದಲ್ಲಿ ಇಳಿಕೆ, ಸಿದ್ದರಾಮಯ್ಯ ವ್ಯರ್ಥ ಆರೋಪ : ಸಚಿವ ಪ್ರಲ್ಹಾದ ಜೋಶಿ

ನವದೆಹಲಿ
ಕರ್ನಾಟಕ ಸರಕಾರದ ನೇತೃತ್ವ ವಹಿಸಿರುವ ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕಳೆದ ಒಂದೂವರೆ ವರ್ಷದಲ್ಲಿ ತಮ್ಮ ಸರಕಾರದ ವೈಫಲ್ಯ ಹಾಗೂ ಹುಳುಕುಗಳನ್ನು ಮರೆಮಾಚಲು ಒಂದಿಲ್ಲ ಒಂದು ವಿಷಯದಲ್ಲಿ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗ ಅದರ ಮುಂದುವರೆದ ಭಾಗವಾಗಿ ಇಂದು ನವದೆಹಲಿಯಲ್ಲಿ ಕೇಂದ್ರ ಅರ್ಥ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ನಬಾರ್ಡ್ ನಿಂದ ಸಹಕಾರಿ ಸಂಘಗಳ ಮೂಲಕ ಕರ್ನಾಟಕಕ್ಕೆ ನೀಡುವ ಕೃಷಿ ಸಾಲದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿರುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಎಂದು ಕೇಂದ್ರ ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ನಬಾರ್ಡ್ ನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಕಳೆದ ಬಾರಿ ಕರ್ನಾಟಕಕ್ಕೆ 5,600 ಕೋಟಿ ರೂ. ಸಾಲ ನೀಡಿದ್ದ ನಬಾರ್ಡ್, ಈ ವರ್ಷ 2,340 ಕೋಟಿ ಸಾಲ ನೀಡಿದೆ. ಸಾಲದ ಪ್ರಮಾಣ ಶೇ.58 ರಷ್ಟು ಕಡಿತ ಮಾಡಲಾಗಿದೆ. ಇದು ಕರ್ನಾಟಕಕ್ಕೆ ಆದ ಅನ್ಯಾಯ ಎಂದು ಸಿ.ಎಂ. ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ.
ಅವರು ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನಬಾರ್ಡ್ ನಿಂದ ಕರ್ನಾಟಕ್ಕೆ ಯಾವುದೇ ಅನ್ಯಾಯವೂ ಆಗಿಲ್ಲ ಕೃಷಿ ಸಾಲದಲ್ಲಿ ಕಡಿಮೆಯೂ ಆಗಿಲ್ಲ ಎಂದು ಅಂಕಿ ಅಂಶಗಳ ಮೂಲಕ ವಿವರಿಸಿದರು.
ಯಾವಾಗಲೂ ಮೊದಲಿನಿಂದಲೂ ನಡೆದುಕೊಂಡು ಬಂದ ವ್ಯವಸ್ಥೆಯನ್ವಯ ದೇಶದಲ್ಲಿಯ ಎಲ್ಲಾ ಬ್ಯಾಕುಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳು, ಶೆಡ್ಯುಲ್ ಬ್ಯಾಂಕುಗಳು ಹಾಗೂ ಇತರ ಖಾಸಗಿ ಬ್ಯಾಂಕುಗಳಿಗೆ ಒಟ್ಟು ತಮ್ಮ ಸಾಲ ನೀಡಿಕೆಯಲ್ಲಿ ಕೃಷಿ ಕ್ಷೇತ್ರಕ್ಕೆ 40% ನಿಗದಿಪಡಿಸುತ್ತಿದ್ದು, ಯಾವ ಬ್ಯಾಂಕುಗಳು ಈ ಶೇಕಡಾವಾರದಲ್ಲಿ ಕಡಿಮೆ ಸಾಲ ನೀಡಿದಲ್ಲಿ ಅಷ್ಟು ಪ್ರಮಾಣದ ಮೊತ್ತವನ್ನು ಆಯಾ ಬ್ಯಾಂಕುಗಳಿಂದ ವಾಪಸು ಪಡೆದು ನಬಾರ್ಡ್ ಗೆ ಆರ.ಬಿ.ಐ. ನೀಡುತ್ತದೆ. ಈ ಹಣವನ್ನೇ ನಬಾರ್ಡ್ ಆಯಾ ರಾಜ್ಯಗಳ ಸಹಕಾರಿ ಸಂಘಗಳ ಬ್ಯಾಕುಗಳ ಮೂಲಕ ರೈತರಿಗೆ ಕೃಷಿ ಸಾಲ ನೀಡುತ್ತವೆ.
ಈ ವಿಷಯ ಸಿದ್ದರಾಯ್ಯ ಅವರಿಗೆ ತಿಳಿದಿಲ್ಲವೆಂತಲ್ಲ, ಆದರೆ ವಿಷಯಾಂತರ ಮಾಡಿ ಜನರನ್ನು ದಾರಿ ತಪ್ಪಿಸಲು ಈ ರೀತಿ ತಮ್ಮ ಮಾಹಿತಿಯನ್ನು ನೀಡುತ್ತಾ ತಮ್ಮ ಸರಕಾರದಲ್ಲಾದ ಭ್ರಷ್ಟಾಚಾರ ವೈಫಲ್ಯ ಹಾಗೂ ಇತರ ಅಕ್ರಮಗಳನ್ನು ಮುಚ್ಚಿಕೊಳ್ಲಲು ಈ ರೀತಿ ಮಾಡುತ್ತಿದ್ದಾರೆ. ಎಂದು ಸಚಿವ ಜೋಶಿ ತಿರುಗೇಟು ನೀಡಿದರು.
ಹಾಗೆ ನೋಡಿದರೆ ಕರ್ನಾಟಕದಲ್ಲಿ ಕರ್ನಾಟಕದ್ದೇ ಆದ ಬ್ಯಾಂಕುಗಳು ಕೃಷಿ ಸಾಲ ನೀಡಿಕೆಯಲ್ಲಿ ಉತ್ತಮ ಕಾರ್ಯ ಮಾಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಾಗೂ ದೇಶದ ಇತರ ಬ್ಯಾಂಕುಗಳು ಕೃಷಿಸಾಲ ಉತ್ತಮ ರೀತಿಯಲ್ಲೇ ನೀಡಿರುವುದರಿಂದ ನಬಾರ್ಡ್ ನ ಶೇಕಡಾವಾರು ನಿಗದಿತ ಗುರಿ ಸಹಜವಾಗಿ ಕಡಿಮೆಯಾಗಿದೆ.
ಕರ್ನಾಟಕ ರಾಜ್ಯ ಪ್ರಸಕ್ತ ಸಾಲಿನಲ್ಲಿ 3.78 ಲಕ್ಷ ಕೋಟಿಗಳ ಬೃಹತ್ ಬಜೆಟ್ ನೀಡಿದ್ದರೂ ರೈತರಿಗೆ ಕೃಷಿ ಸಮ್ಮಾನ ಯೋಜನೆಯಲ್ಲಿ ರಾಜ್ಯದಿಂದ ನೀಡಲಾಗುತ್ತಿದ್ದ 4000 ರೂಗಳ ಸಹಾಯಧನ ಸ್ಥಗಿತಗೊಳಿಸಲಾಗುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಯಲ್ಲಿನ ಪಿಂಚಣಿ ಹಣ ಬರುತ್ತಿಲ್ಲ, ವೃದ್ದಾಪ್ಯ ವೇತನಕೊಡುತ್ತಿಲ್ಲ, SC,ST, ಫಂಡ್ ಬೇರೆ ಉದ್ದೇಶಗಳಿಗೆ ಬಳಕೆ ಮಾಡುತ್ತಿದ್ದಾರೆ. ಇತ್ಯಾದಿ ವಿವರ ನೀಡಿದ ಸಚಿವ ಜೋಶಿ ಈ ವೈಫಲ್ಯಗಳಿಗೆ ಸೂಕ್ತ ಸಮಜಾಯಿಸಿ ನೀಡಲು ಸಾದ್ಯವಾಗದೇ ಮುಖ್ಯಮಂತ್ರಿಗಳು ವ್ಯರ್ಥವಾಗಿ ಇಂತಹ ವಿಷಯ ಪ್ರಸ್ತಾಪಿಸಿ ಜನರ ದೃಷ್ಟಿಯನ್ನು ಬೇರೆ ಕಡೆ ತಿರುಗಿಸುವ ಸಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ನಬಾರ್ಡ್ ವ್ಯವಸ್ಥೆ ಮೋದಿಯವರು ಬಂದ ಮೇಲೆ ಆದದ್ದಲ್ಲ. ಉದಾಹರಣೆಗೆ 2023-24ರಲ್ಲಿ ಕರ್ನಾಟಕಕ್ಕೆ ಗ್ರೌಂಡ್ ಲೆವೆಲ್ ಕ್ರೆಡಿಟ್ ರೂ. 51879 ಇದ್ದರೆ 24-25ರಲ್ಲಿ 207615 ಕೋಟಿ ಆಗಿದೆ. ಇತ್ಯಾದಿ ಅಂಕಿ ಅಂಶಗಳನ್ನು ಸಚಿವರು ನೀಡಿದರು.

ಬಿಪಿಎಲ್‌ ಕಾರ್ಡ್ ವಿವಾದ
ಕೇಂದ್ರದ ಮಾನದಂಡದ ಮೇಲೆ‌ ಸರಿಯಾಗಿ ಮಾಡಿ‌ ಎಂದು ನಾವು ಹೇಳುತ್ತೇವೆ ಗೃಹ ಲಕ್ಷ್ಮಿ ಯೋಜನೆ ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ, ನಾನು ಬಡವರ ಪರವೇ ಮಾತನಾಡುವವನು, ಸಿ ಎಂ. ಸಿದ್ದರಾಮಯ್ಯ ಸಿರಿವಂತರ ಹೆಸರಿನಲ್ಲಿ ಬಡವರ ಹೆಸರನ್ನು ತೆಗೆಯುತ್ತಿದ್ದಾರೆ. ಇದನ್ನು ಮೊದಲು ಪ್ಯೂರಿಫೈ ಮಾಡಿ ಎಂದು ನಾವೇ ಹೆಳಿದ್ದೆವು.
ಬಿಪಿಎಲ್ ಕಾರ್ಡ್ ಸಂಖ್ಯೆ ಕಡಿಮೆ ಆಗಬೇಕು ಎಂದು ಗ್ಯಾರಂಟಿಗಳಿಗೆ ದುಡ್ಡು ಇಲ್ಲ ಎನ್ನುವ ಕಾರಣಕ್ಕೆ ಕೇಂದ್ರದ ಹೆಸರು ಬಳಸಬೇಡಿ ಎಂದೂ ಜೋಶಿ ಹೇಳಿದ್ದಾರೆ. ಭಾರತದ ನೀತಿ ಆರ್ . ಬೀಐ ವರದಿ ನೀಡಿ ದೇಶದಲ್ಲಿ 13 ಕೋಟಿ ಜನ ಕಡು ಬಡತನದಿಂದ ಹೊರ ಬಂದಿದ್ದಾರೆ. ಇದರ ಆಧಾರದ ಮೆಳೆ ಕರ್ನಾಟಕದಲ್ಲೂ ಕಮ್ಮಿಯಾಗಬೇಕು ಬಿಪಿಎಲ್ ಕಾರ್ಡ್ ದಾರರಿಗೆ ಅನ್ಯಾಯವಾಗುತ್ತಿದೆ.ಇದಕ್ಕೆಲ್ಲ ಕೇಂದ್ರ ಸರಕಾರವನ್ನು ಬಳಸಬೇಡಿ, ಸುಮ್ಮನೇ ಒಂದಷ್ಟು ಜನರನ್ನು ಬಿಪಿಎಲ್ ಕಾರ್ಡ್ ಬಳಕೆದಾರರರನ್ನು ತೆಗೆಯಬೇಕು ಎನ್ನುವ ಧೋರಣೆ ಬಿಡಿ, ಅಂತಹ ಕೆಲಸ ಮಾಡಬೇಡಿ, ಪಡಿತರವನ್ನು ಕೇಂದ್ರ ಸರಕಾರದ ಮಾನದಂಡದ ಮೇಲೆಯೇ ಮಾಡಲಾಗಿದ್ದು, ಬಿಜೆಪಿ ಯಾವಾಗಲೂ ಬಡವರ ಪರವಾಗಿಯೇ ಕೆಲಸ ಮಾಡುತ್ತಿದೆ. ಎಂದರು.

Total Views 61
RELATED ARTICLES

Most Popular

Recent Comments

KNN City News
Home
E-Paper