Monday, November 23, 2026
HomeBelagaviಮುದೊಂದು ದಿನ ನಾನು ನಂಬರ್ ಒನ್ ಆಗೇ ಆಗ್ತೇನಿ: ಯತ್ನಾಳ

ಮುದೊಂದು ದಿನ ನಾನು ನಂಬರ್ ಒನ್ ಆಗೇ ಆಗ್ತೇನಿ: ಯತ್ನಾಳ

ಬೆಳಗಾವಿ
ಕಳೆದ ಹದಿನೈದು ವರ್ಷದಿಂದ ಯತ್ನಾಳ ಉಚ್ಚಾಟನೆ ಎನ್ನುವ ಮಾತು ಕೇಳಿ ಬರುತ್ತಿದೆ. ನಾನೊಂದು ದಿನ ನಾನು‌ ನಂಬರ್ ಒನ್ ಆಗುತ್ತೇನೆ ಎಂದು ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಭಾನುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು‌. ಬಸನಗೌಡಾ ಪಾಟೀಲ್ ಯತ್ನಾಳ ಉಚ್ವಾಟನೆ ಮಾಡಬೇಕೆಂದು 15ಕ್ಕೂ ಹೆಚ್ವು ಶಾಸಕರು ಯಡಿಯೂರಪ್ಪನವರ ಮನೆ ಬಿಟ್ಟು‌ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳ ದೊಡ್ಡ ಅನಾಹುತ. ಮನೆ ಬಿಟ್ಟು‌ ಹೋಗುವುದಿಲ್ಲ ಎಂದರೆ ಯಡಿಯೂರಪ್ಪ ಮಲಗಬೇಕೋ ಬೇಡವೋ ಎಂದ ಅವರು, ನನಗೆ ಬಹಳ ಕಣ್ಣೀರು ಬರುತ್ತಿದೆ‌ ಎಂದರು.
ಪ್ರಧಾನಿ ನರೇಂದ್ರ ‌ಮೋದಿ ಅವರು ವಕ್ಫ್ ಕಾಯ್ಸೆಗೆ 44 ತಿದ್ದುಪಡಿಯ ತರಲು ಕಳೆದ ಲೋಕಸಭೆಯ ಅಧಿವೇಶನದಲ್ಲಿ ಮಂಡಿಸಿದ್ದಾರೆ. ವಕ್ಫ್ ಕಿತ್ತು ಹಾಕಬೇಕೆಂದು ಬೀದರ್ ನಿಂದ ಕಲ್ಯಾಣ‌ ಕರ್ನಾಟಕ ಪ್ರವಾಸ ನಡೆಸಿ ಈಗ ಕಿತ್ತೂರು ಕರ್ನಾಟಕದಲ್ಲಿ ವಕ್ಫ್ ಕುರಿತು ಜನಜಾಗೃತಿ ಮಾಡಿ ಸೋಮವಾರ ನಾವು ದೆಹಲಿಗೆ ಹೋಗುತ್ತಿದ್ದೇವೆ ಎಂದರು.
ದೆಹಲಿಗೆ ಹೋಗಿ ರೈತರ ಹಾಗೂ ಮಠ, ಮಂದಿರದ ಆಸ್ತಿಗಳು ವಕ್ಫ್ ಗೆ ಬರೆದಿದ್ದಾರೆ ಎನ್ನುವ ಮಾಹಿತಿಯನ್ನು ಕೇಂದ್ರದ ಸಮಿತಿ ಮುಂದೆ ಕೊಡುತ್ತೇವೆ ಎಂದರು.
ವಕ್ಫ್ ಬೆಂಕಿ ಹಚ್ಚಿದ್ದು ಸಚಿವ ಜಮೀರ್ ಅಹ್ಮದ್ ಖಾನ್ ಸಾಕಷ್ಟು ಹಿಂದು ಹಾಗೂ ರೈತರ ಆಸ್ತಿಯನ್ನು ವಕ್ಫ್ ನೋಟಿಸ್ ನೀಡಿದ್ದಾರೆ. ಇದು ದೊಡ್ಡ ದುರಂತ ಎಂದರು‌‌.
ಮೊದಲ‌ ಹಂತದ ವಕ್ಫ್ ಹೋರಾಟ ಮುಗಿದಿದೆ. ನಾವು ಚುನಾವಣೆಯಾಗಿ ವಕ್ಫ್ ಹೋರಾಟ ಎಂದು ಕಾಂಗ್ರೆಸ್ ನಾಯಕರು ಮಾಡಿದ್ದರು. ಆದರೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಯತ್ನಾಳ ಬಸವಣ್ಣನ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ ಎನ್ನುವ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಹೆಸರಿನಲ್ಲಿಯೇ ಬಸವಣ್ಣ ಇದೆ. ಒಂದು ಸಾವಿರ ಆಕುಳ ಕಟ್ಟಿದ್ದೇನೆ. ಕಾಯಕವೇ ಕೈಲಾಸದಂತೆ ನಡೆಯುತ್ತಿದ್ದೇವೆ ಎಂದರು.
ಪಂಚಮಸಾಲಿ ಕೋಟಾದಲ್ಲಿ ಸಚಿವ ಸ್ಥಾನ ಪಡೆದವರು. ಮೀಸಲಾತಿ ಕೊಡಿಸುವಲ್ಲಿ ಶ್ರಮಿಸಬೇಕು. ಬಿಜೆಪಿ ಸರಕಾರದ ಅವಧಿಯಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಕೊಡಿಸುವುದರಲ್ಲಿ ಎಲ್ಲರೂ ಮೋಸ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಈಗ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸಿ ಎಂದರೆ‌ ಮುಜುಗರ ಬರುತ್ತದೆ ಎಂದಿದ್ದಾರಂತೆ. ನಾನು ಎಲ್ಲಾ ಸಮುದಾಯದವರ ಪರವಾಗಿ ಹೋರಾಟ ಮಾಡುತ್ತೇನೆ. ಡಿ.10 ರಂದು ನಮ್ಮ ಸಮಾಜ ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು.

Total Views 98
RELATED ARTICLES

Most Popular

Recent Comments

KNN City News
Home
E-Paper