Monday, November 23, 2026
HomeBelagaviಎಟಿಎಂಗೆ ಕನ್ನ ಹಾಕಿದ ಆರೋಪಿ ಬಂಧನ: ಯಡಾ ಮಾರ್ಟಿನ್

ಎಟಿಎಂಗೆ ಕನ್ನ ಹಾಕಿದ ಆರೋಪಿ ಬಂಧನ: ಯಡಾ ಮಾರ್ಟಿನ್

ಬೆಳಗಾವಿ
ನಗರದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಎಸ್ ಪ್ರೋಸಿಗರ ಹೋಲ್ಡಿಂಗ್ ಕಂಪನಿಯ ನೌಕರರನ್ನು ಬಂಧಿಸಿ ಚಿನ್ನಾಭರಣ ಸೇರಿ 7.30 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಈಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಟಿಎಂ ಕಳ್ಳತನ ಪ್ರಕರಣದಲ್ಲಿ ಸ್‌ಐಎಸ್ ಪ್ರೋಸಿಗರ ಹೋಲ್ಡಿಂಗ ಪ್ರೈವೇಟ್ ಕಂಪನಿ ನೌಕರರ ಕೃಷ್ಣಾ ದೇಸಾಯಿ (23) ಬಂಧಿಸಲಾಗಿದೆ. ನಗರದ ಅಂಜುಮನ್ ಕಟ್ಟಡದಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕಿನ ಎಟಿಎಂ ಪಾಸ್‌ವರ್ಡ್ ದುರಪಯೋಗ ಪಡಿಸಿಕೊಂಡು ನ.30ರಂದು 8,65,500 ರೂ. ಹಣವನ್ನು ಕಳ್ಳತನ ಮಾಡಿದ್ದಾನೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಡಿ.2ರಂದು ಆರೋಪಿಯನ್ನು ಬಂಧಿಸಿ ಕಳ್ಳತನ ಹಣದಿಂದ ಖರೀದಿ ಮಾಡಿದ್ದ 20 ಗ್ರಾಂ ಚಿನ್ನಾಭರಣ ( ಮೌಲ್ಯ 1.56 ಲಕ್ಷ ರೂ)ಸೇರಿ 5,74,000 ರೂ. ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ಪ್ರಗತಿ ಹಂತದಲ್ಲಿದ್ದು, ಬ್ಯಾಂಕಿನ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿದರು.

Total Views 35
RELATED ARTICLES

Most Popular

Recent Comments

KNN City News
Home
E-Paper