
ಬೆಳಗಾವಿ
ಪರಪುರುಷ ಮಹಿಳೆ ಇರುವ ರೂಮ್ ಗೆ ಹೋಗಿ ವಿಡಿಯೋ ಮಾಡಿಕೊಂಡಿದ್ದ ಕೀಚಕರ ವಿರುದ್ಧ ಹನಿ ಟ್ರ್ಯಾಪ್ ಪ್ರಕರಣ ದಾಖಲಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಅರೆನಗ್ನ ವಿಡಿಯೋ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ಭೂಪರು ವಿಡಿಯೋ ಮಾಡಿಟ್ಟುಕೊಂಡು 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. 9 ಲಕ್ಷ ಹಣ ಪಡೆದುಕೊಂಡು ಮತ್ತೆ 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಕಿರಾತಕರು ಒಂದು ಲಕ್ಷ ಕೊಡು ಇಲ್ಲವಾದರೆ ನಿನ್ನ ಖಾಸಗಿ ಕ್ಷಣದ ವಿಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಹುಕ್ಕೇರಿಯ ಲಾಡ್ಜ್ ಒಂದರಲ್ಲಿ ತಂಗಿದ್ದ ಮಹಿಳೆ ಹಾಗೂ ಪುರುಷನ ವಿಡಿಯೋ ಮಾಡಿದ್ದ ಅಬ್ದುಲ್ ಪೈಲವಾನ್,ಸುಭಾನ್,ಹಾಗೂ ರೇಷ್ಮಾ ಕಡಬಿಶಿವಾಪುರ ಎಂಬುವವರ ಮೇಲೆ ದೂರು ದಾಖಲಾಗಿದೆ. ಈರಪ್ಪ ಮುನ್ಯಾಳ ಎಂಬುವವರಿಂದ ಮೂವರ ವಿರುದ್ಧ ಮೂಡಲಗಿ ಠಾಣೆಗೆ ದೂರು ದಾಖಲಾಗಿದೆ. ಈರಪ್ಪನ ದೂರಿನ ಮೇರೆಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
