ಕನ್ನಡಮ್ಮ ಸುದ್ದಿ

ತಾಲೂಕಿನ ರೈತರಾದ ಈರಣ್ಣ ಸಣ್ಣಕ್ಕಿ,ಬಾಬು ಪಟ್ಕಾಳ್ ಮತ್ತು ಸಿದ್ದಯ್ಯ ಎಂಬುವವರ ಕಬ್ಬು ಶಾರ್ಟ ಸರ್ಕ್ಯೂಟ್ ನಿಂದ ಸುಟ್ಟು ಹೋಗಿತ್ತು ಇದಕ್ಕೆ ಹೆಸ್ಕಾಂ ಇಲಾಖೆ ಕಾರಣ ಇದಕ್ಕೆ ಪರಿಹಾರ ಒದಗಿಸಿ ಎಂದು 2016 ರಲ್ಲಿ ರೈತರು ಕೋರ್ಟ್ ಗೆ ಕೇಸ್ ದಾಖಲಿಸಿದ್ದರು.
ಅದರಂತೆ 2016 ರಿಂದ ಇಲ್ಲಿಯವರೆಗೆ ಒಟ್ಟು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಲಕ್ಷ ಪರಿಹಾರ ಮೊತ್ತವನ್ನ ಖಾನಾಪುರ ಹೆಸ್ಕಾಂ ಇಲಾಖೆ ನೀಡುವಲ್ಲಿ ವಿಫಲವಾಗಿದ್ದು ಅದಕ್ಕೆ ಕೋರ್ಟ ಆದೇಶದಂತೆ ಇವತ್ತು ಹೆಸ್ಕಾಂ ಕಚೇರಿಯ ಕಂಪ್ಯೂಟರ್,ಒಂದು ಟ್ರಕ್ ಮತ್ತು ಒಂದು ಬುಲೆರೋ ವಾಹನವನ್ನ ಕಕ್ಕಷಿದಾರರ ಪರ ವಕೀಲರು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
