
ಬೆಳಗಾವಿ
ಬೆಳಗಾವಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ಬಂಧನದ ಕುರಿತ ವರದಿ ಮಾಡುವ ವೇಳೆ ಪತ್ರಕರ್ತರ ಮೇಲೆ ಪೊಲೀಸರ ಹಲ್ಲೆ ಖಂಡಿಸಿ ಶನಿವಾರ ಬೆಳಗಾವಿ ನಗರ ಪೊಲೀಸ್ ಆಯಕ್ತರ ಕಚೇರಿ ಎದುರು ಬೆಳಗಾವಿ ಪತ್ರಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿಲೀಪ್ ಕುರಂದವಾಡೆ, ಪತ್ರಕರ್ತರಾದ ಶ್ರೀಧರ, ಮಂಜುನಾಥ ಪಾಟೀಲ್, ಶ್ರೀಕಾಂತ ಕುಬಕಡ್ಡಿ, ವಿನಾಯಕ ಮಠಪತಿ,ರಮೇಶ್ ಹಿರೇಮಠ, ಚಂದ್ರಕಾಂತ ಸುಗಂದಿ, ಸಂತೋಷ ಚಿನಗುಡಿ, ಸಂತೋಷ ಶ್ರೀರಾಮುಡು , ಚಂದ್ರು ಶ್ರೀರಾಮುಡು, ಸಹದೇವ ಮಾನೆ, ರಾಜ್ ಹಿರೇಮಠ, ಸುಬಾನಿ ಮುಲ್ಲಾ, ಜಗದೀಶ್ ವಿರಕ್ತಮಠ, ವಿನಾಯಕ ಮಠಪತಿ, ಮೈಲಾರಿ, ಅನಿಲ್ ಕಾಜಗಾರ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
