
ಬೆಳಗಾವಿ
ಗೋಕಾಕ ತಾಲೂಕಿನ ಮಹಾಲಕ್ಷ್ಮೀ ಬ್ಯಾಂಕಿನಲ್ಲಿ ಸಿಬ್ಬಂದಿ ಮಾಡಿದ ಅವ್ಯವಹಾರದಿಂದ ಆತಂಕಗೊಂಡಿದ್ದ ಗ್ರಾಹಕರು ಶಾಸಕ ರಮೇಶ ಜಾರಕಿಹೊಳಿ ಅವರು ನುಡಿದಂತೆ ನಡೆದು ಗ್ರಾಹಕರ ಬ್ಯಾಂಕ ಠೇವಣಿ ಮರಳಿ ಗ್ರಾಹಕರಿಗೆ ತಲುಪಿಸಲು ಯಶಸ್ವಿಯಾಗಿದ್ದಾರೆ.
ಮಹಾಲಕ್ಷ್ಮೀ ಬ್ಯಾಂಕನಲ್ಲಿ 87ಕೋಟಿ ರೂ. ಹಣವನ್ನು ಸಿಬ್ಬಂದಿಗಳು ಬ್ಯಾಂಕಿಗೆ ವಂಚಿಸಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಬ್ಯಾಂಕಿನಲ್ಲಿ ಠೇವಣಿ ಮಾಡಿದ್ದ ಸುಮಾರು 9500ಕ್ಕೂ ಅಧಿಕ ಗ್ರಾಹಕರು ಸಂಕಷ್ಟದಲ್ಲಿದ್ದರು. ತಕ್ಷಣವೇ ಬ್ಯಾಂಕಿನ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದ ಶಾಸಕ ರಮೇಶ ಜಾರಕಿಹೊಳಿ ವಂಚನೆ ಪ್ರಕರಣದ ಮಾಹಿತಿ ಪಡೆದು ನಗರದ ಮಹಾಲಕ್ಷ್ಮೀ ಸಭಾಭವನದಲ್ಲಿ ಬ್ಯಾಂಕಿನ 5 ಸಾವಿರ ಗ್ರಾಹಕರ ಸಭೆ ನಡೆಸಿ ತಮ್ಮ ಹಣಕ್ಕೆ ನಾನು ಜವಾಬ್ದಾರನಿದ್ದು, ತಮ್ಮ ಹಣ ಮರಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿ ಪ್ರತಿಭಟನೆ ನಡೆಸದಂತೆ ಗ್ರಾಹಕರಿಗೆ ಮನವಿ ಮಾಡಿದ್ದರು.
ಮಹಾಲಕ್ಷ್ಮೀ ಬ್ಯಾಂಕಿನ ಗ್ರಾಹಕರಿಗೆ ಹಣ ಮಂಗಳವಾರ ಸಂಜೆ 6 ಗಂಟೆಗೆ ತಮ್ಮ ಹಣ ಮರುಳುತ್ತಿದ್ದಂತೆಯೇ ಗ್ರಾಹಕರು ಸಂತೋಷದಿಂದ ಶಾಸಕರನ್ನು ಅಭಿನಂಧಿಸಿ ಬ್ಯಾಂಕಿನಿಂದ ಹಣ ಪಡೆಯುತ್ತಿದ್ದಾರೆ.
ಶಾಸಕ ರಮೇಶ ಜಾರಕಿಹೊಳಿ ನಿರಂತರ ಪ್ರಯತ್ನದಿಂದ ಡಿ.ಐ.ಸಿ.ಜಿ.ಸಿ ಇನ್ನೂರೆನ್ಸ್ ಮೊತ್ತ 86 ಕೋಟಿ ರೂ. ಬಿಡುಗಡೆಗೊಂಡಿದೆ. ಅಲ್ಲದೆ, ಬ್ಯಾಂಕಿನಲ್ಲಿರುವ ಎಸ್.ಬಿ ಖಾತೆ ಮತ್ತು ಸಿಎಎಫ್ಡಿ ಆರ್ಡಿ ಹಾಗೂ ಪಿಗ್ನಿ ಸೇರಿದಂತೆ ವಿವಿಧ ಖಾತೆಗಳಲ್ಲಿರುವ ಹಣದ ಮೊತ್ತ ಗರಿಷ್ಠ 5 ಲಕ್ಷ ರೂ. ವರೆಗಿನ ಹಣವನ್ನು ಮರಳಿ ವಿಮೆ ಮೂಲಕ ಬ್ಯಾಂಕಿನ ಗ್ರಾಹಕರ ಖಾತೆಗೆ ಜಮೆಯಾಗಿದೆ.
