Monday, November 23, 2026
HomeBelagaviಶಾಸಕರ ನಿಧಿಯಿಂದ ಗ್ರಾಮ ಆಡಳಿತಾಧಿಕಾರಿಗಳಿಗೆ ಕಂಪ್ಯೂಟರ್ ವಿತರಣೆ

ಶಾಸಕರ ನಿಧಿಯಿಂದ ಗ್ರಾಮ ಆಡಳಿತಾಧಿಕಾರಿಗಳಿಗೆ ಕಂಪ್ಯೂಟರ್ ವಿತರಣೆ

ಕನ್ನಡಮ್ಮ ಸುದ್ದಿ

ಖಾನಾಪುರ:ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ ತರಲು ಖಾನಾಪುರ ಶಾಸಕ ವಿಠ್ಠಲ ಹಲಗೇಕರ ತಮ್ಮ ಶಾಸಕರ ನಿಧಿಯಿಂದ 20 ಕಂಪ್ಯೂಟರ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಟ್ಟಣದ ತಹಶೀಲ್ದಾ‌ರ್ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ
ಶಾಸಕ ವಿಠ್ಠಲ ಹಲಗೇಕರ ತಾಲೂಕಿನ ಪ್ರತಿ ಗ್ರಾ.ಪಂ.ಗೆ ತಲಾ ಒಬ್ಬೊಬ್ಬ ಗ್ರಾಮ ಆಡಳಿತಾಧಿಕಾರಿಗಳು ಇದ್ದು, ತಾಲೂಕಿನಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಕೊರತೆ ಇದೆ, ಹೀಗಾಗಿ ಒಬ್ಬ ಅಧಿಕಾರಿಗೆ ಹಲವು ಗ್ರಾಮಗಳಿವೆ.

ಸದ್ಯ ತಾಲೂಕಿನಲ್ಲಿ 40 ಗ್ರಾಮ ಲೆಕ್ಕಾಧಿಕಾರಿಗಳಿದ್ದಾರೆ. ಆದರೆ ಮೊದಲ ಹಂತದಲ್ಲಿ ಶಾಸಕರ ನಿಧಿಯಿಂದ 10 ಲಕ್ಷ ನಿಧಿಯಡಿ 20 ಕಂಪ್ಯೂಟರ್ ವಿತರಣಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳ ಕೆಲಸದಲ್ಲಿ ಪಾರದರ್ಶಕತೆ ಬರಲಿದೆ. ಪ್ರತಿಯೊಬ್ಬ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ಇಲಾಖೆಯಲ್ಲಿ ಕಚೇರಿಯನ್ನು ರಚಿಸಿ ಆ ಸ್ಥಳದಲ್ಲಿ ಈ ಕಂಪ್ಯೂಟರ್‌ಗಳನ್ನು ಬಳಸಿ ಸಾರ್ವಜನಿಕರ ಸೇವೆ ಮಾಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಲೂಕಿನ ಎಲ್ಲ ಗ್ರಾಮ ಸಹಾಯಕ ಅಧಿಕಾರಿಗಳು ಗ್ರೇಡ್ ಟು ತಹಸೀಲ್ದಾ‌ರ ರಾಕೇಶ್ ಬುವಾ, ಕಂದಾಯ ನಿರೀಕ್ಷಕರು ಉಪಸ್ಥಿತರಿದ್ದರು.

ವರದಿ:ಪ್ರಸನ್ನ ಕುಂಬಾರ

ಖಾನಾಪುರ

Total Views 393
RELATED ARTICLES

Most Popular

Recent Comments

KNN City News
Home
E-Paper