
ಬೆಳಗಾವಿ
ಇಡೀ ದೇಶಕ್ಕೆ ಇಂದು ಭಾವನಾತ್ಮಕ ಘಳಿಗೆ. ದೇಶದ ಅರ್ಥಿಕ, ಸಂವೇದನಾಶೀಲ, ಮೃದು ಭಾಷಿ ಪ್ರಧಾನಿ ಸಾಧಾರಣ ವ್ಯಕ್ತಿಯ ಕನಸಿಗೆ ಆಶಾಕಿರಣವಾಗಿದ್ದ ಡಾ ಮನಮೋಹನ್ ಸಿಂಗ್ ಇಂದು ನಮ್ಮ ಮಧ್ಯೆ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಸಂತಾಪ ಸೂಚಿಸಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮನಮೋಹನ್ ಸಿಂಗ್ ಅವರ ಕೆಲಸದ ಮೂಲಕ ದೇಶ ಇಡೀ ಸಾಮಾನ್ಯ ಜನತೆ ಅವರ ನೆನಪಿಡುತ್ತದೆ. ದೇಶದ ಅರ್ಥ ವ್ಯವಸ್ಥೆ ಅಭಿವೃದ್ದಿ ಪಡಿಸಿದವರು. ದೇಶವನ್ನು ಒಂದು ಗೌರವ ಸ್ಥಾನದಲ್ಲಿ ನಿಲ್ಲಿಸಿದ್ದು ಮೋಹನ್ ಸಿಂಗ್ ಇದಕ್ಕೆ ಇಡೀ ಜಗತ್ತು ಸಾಕ್ಷಿಯಾಗಿದೆ ಎಂದರು.
ಸೋನಿಯಾ ಜೊತೆ ಸೇರಿ ಕಾಂಗ್ರೆಸ್ ಐಡಿಯಾ ಬೆಳೆಸಿದವರು.ಜನಸಮಾನ್ಯರಿಗೆ ಅನುಕೂಲಕರ ಯೋಜನೆ ಮಾಡಿದವರು. ಶಿಕ್ಷಣ, ಆಹಾರ ಕಾಯ್ದೆ ತಂದವರು ಅವರಕೆ ಲಸ ಒಂದು ದಿನದಲ್ಲಿ ಎಣಿಸಲು ಸಾಧ್ಯವಿಲ್ಲ. ಅವರ ಮನದಲ್ಲಿ ದೇಶದಲ್ಲಿ ಸಮಾವೇಶಿ ಸಮುಚ್ಚಿತ ವಿಚಾರ ಇತ್ತು. ಅವರ ಅಗಲಿಕೆ ಶತಮಾನ ಕಳೆದರೂ ತೀರಿಸಲು ಸಾಧ್ಯವಿಲ್ಲ ಎಂದರು.
ಪ್ರೆಸ್ ಗೆ ಉತ್ತರ ನೀಡಿದ ಕೊನೆಯ ಪ್ರಧಾನಿ ಮನಮೋಹನ್ ಸಿಂಹ್ ಅವರ ಕಾರ್ಯ ನಮಗೆ ಮಾರ್ಗದರ್ಶಕವಾಗಿದೆ. ನನಗೆ ಅವರು ಗುರು ಆಗಿದ್ರು ತಂದೆ ಸಮಾನರಾದ್ದರು.ಗಾರ್ಡಿಯನ್ ಆಗಿದ್ದರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
