
ಬೆಳಗಾವಿ
ಗಂಡನ ಮನೆಯವರ ಕಿರುಕುಳಕ್ಕೆ ವಿವಾಹಿತೆಯೋರ್ವಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆಯನ್ನು ಸವಿತಾ ಮಾರುತಿ ಜೋಗಾನಿ(32) ಎಂದು ಗುರುತಿಸಲಾಗಿದೆ.ಮೂಲತಃ ರಾಕಸಕೊಪ್ಪ ಗ್ರಾಮದ ಮಾರುತಿ ಜೋಗಾನಿ(40) ಕುಟುಂಬಸ್ಥರ ವಿರುದ್ಧ ಸುನಿತಾ ಕುಟುಂಬಸ್ಥರ ಆರೋಪ ಮಾಡಿದ್ದಾರೆ.
ಕಳೆದ 2018ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿಯೇ ಮದುವೆ ಆಗಿದ್ದ ಮಾರುತಿ-ಸುನಿತಾ, ಮಾರುತಿ ಸರ್ಕಾರಿ ಶಾಲೆ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಮದುವೆ ನಂತರ ಪತಿ ಮಾರುತಿ, ಕುಟುಂಬಸ್ಥರ ನಿರಂತರ ಕಿರುಕುಳ ನೀಡುತ್ತಿದ್ದ ಎಂದು ಸವಿತಾ ಕುಟುಂಬಸ್ಥರು ಆರೋಪಿಸಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಸಂಬಂಧ ದೂರು ದಾಖಲಾಗಿದೆ.
