
ಅನಗೋಳದಲ್ಲಿ ಉದ್ಘಾಟನೆಯಾದ ಧರ್ಮವೀರ ಸಂಭಾಜಿ ಮಹಾರಾಜರ ಪುತ್ಥಳಿ ಅನಧಿಕೃತವಾಗಿ ಉದ್ಘಾಟನೆಯಾಗಿದೆ. ಶೀಘ್ರದಲ್ಲೇ ಜಿಲ್ಲಾಡಳಿತ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರೋಟೋಕಾಲ್ ಪ್ರಕಾರ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅನಗೋಳ ರಹವಾಸಿಗಳ ತಮ್ಮನ್ನು ಭೇಟಿಯಾಗಲು ಬಂದ ವೇಳೆ ಮಾತನಾಡಿರು. ನಿನ್ನೆ ನಡೆದ ಸಂಭಾಜಿ ಪುತ್ಥಳಿ ಲೋಕಾರ್ಪಣೆ ಅನಧಿಕೃತವಾಗಿದೆ. ಸರಕಾರದಿಂದ ಅಧಿಕೃತ ದಿನಾಂಕವನ್ನು ಪ್ರಕಟಿಸಿ ಎಲ್ಲ ಶಾಸಕ, ಸಚಿವರು, ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಎಲ್ಲ ಸಮುದಾಯದ ಮುಖಂಡರನ್ನು ಆಹ್ವಾನಿಸಿ ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದರು.
ಶನಿವಾರ ಅನಗೋಳದ ಹಿರಿಯರೊಂದಿಗೆ ಮಾತನಾಡಿದ್ದೇನೆ. ಜಿಲ್ಲಾಡಳಿತ ಸೂಕ್ತ ಸಮಯದಲ್ಲಿ ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣ ಮಾಡಲು ಸರಕಾರದ ಅನುಮತಿ ಪಡೆಯಬೇಕು. ಆದರೆ ಭಾನುವಾರ ನಡೆದ ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣ ಮಾಡಿದ್ದು ಅನಧಿಕೃತವಾಗಿದೆ. ಇನ್ನೊಂದು ಬಾರಿ ಪಾಲಿಕೆಯಲ್ಲಿ ಠರಾವ್ ಪಾಸ್ ಆಗಿದ್ದು ಹಾಗೂ ನಗರ ಪೊಲೀಸ್ ಆಯುಕ್ತರ ಎನ್ ಒಸಿ ಪಡೆದು ಅದನ್ನು ಸರಕಾರಕ್ಕೆ ಕಳುಹಿಸಿ ಅತೀ ವಿಜೃಂಭಣೆಯಿಂದ ಜಿಲ್ಲಾಡಳಿತ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಈಗಾಗಲೇ ಲೋಕಾರ್ಪಣೆಗೊಂಡಿರುವ ಧರ್ಮವೀರ ಸಂಭಾಜಿ ಮಹಾರಾಜರ ಪುತ್ಥಳಿಯ ಸುತ್ತ ಬ್ಯಾರಿಕೇಡ್ ಅಳವಡಿಸಲಾಗುವುದು.
