Monday, November 23, 2026
HomeBelagaviಪೊಲೀಸರು ಕ್ರೀಡೆಯಲ್ಲಿ ಭಾಗಿಯಾಗಿ ಆರೋಗ್ಯದ ಕಡೆ ಗಮನ ಕೊಡಿ: ಜಿಪಂ ಸಿಇಒ ಶಿಂಧೆ

ಪೊಲೀಸರು ಕ್ರೀಡೆಯಲ್ಲಿ ಭಾಗಿಯಾಗಿ ಆರೋಗ್ಯದ ಕಡೆ ಗಮನ ಕೊಡಿ: ಜಿಪಂ ಸಿಇಒ ಶಿಂಧೆ

ಬೆಳಗಾವಿ
ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ.ಪೊಲೀಸ್ ಕ್ರೀಡಾಕೂಟದಲ್ಲಿ ಎಲ್ಲರೂ ಭಾಗಿಯಾಗಿ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.
ಶುಕ್ರವಾರ ಜಿಲ್ಲಾ ಪೊಲೀಸ್ ಕ್ರೀಡಾಂಗಣದಲ್ಲಿ ನಗರ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಗಡಿಯಲ್ಲಿ ಸೈನಿಕರು ರಕ್ಷಣೆ ಮಾಡುವ ರೀತಿಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಜನರು ನೆಮ್ಮದಿಯಿಂದ ಇರಲು ಕಾರಣ ನಮ್ಮ ಪೊಲೀಸ್ ಇಲಾಖೆ.
ಪೊಲೀಸ್ ಸಿಬ್ಬಂದಿಗಳು ಯಾವುದೇ ರಜೆ, ಹಬ್ಬ ಎನ್ನದೆ ತಮ್ಮ ವೈಯಕ್ತಿಕ ಜೀವನ ಬದಿಗಿಟ್ಟು ಕೆಲಸದ ಒತ್ತಡದಲ್ಲಿ ಕ್ರೀಡಾಚಟುವಟಿಕೆಯಲ್ಲಿ ಭಾಗಿಯಾಗುವುದು ಹೆಮ್ಮೆಯ ಸಂಗತಿ ಎಂದರು.
ಪೊಲೀಸರ ಕೆಲಸದಲ್ಲಿ ಸಾಕಷ್ಟು ಒತ್ತಡ ಇರುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರಂತರವಾಗಿ ಶ್ರಮಿಸಬೇಕಿರುತ್ತದೆ. ಇದರ ನಡುವೆಯೂ ಪೊಲೀಸರ ಅರೋಗ್ಯದ ಹಿತ ದೃಷ್ಟಿಯಿಂದ ಈ‌ ರೀತಿ ಕ್ರೀಡಾಕೂಟ ಆಯೋಜಿಸುವ ಮೂಲಕ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು.‌ ಈ ಕ್ರೀಡಾಕೂಟ ಮಾದರಿಯಾಗಬೇಕು. ಸೋಲು, ಗೆಲುವು ಇದ್ದೆ ಇರುತ್ತದೆ‌. ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ರೋಹನ್ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Total Views 62
RELATED ARTICLES

Most Popular

Recent Comments

KNN City News
Home
E-Paper