Monday, November 23, 2026
HomeBelagaviಜ.12ಕ್ಕೆ ಬಣಗಾರ ಸಮಾಜದ ವಧು-ವರರ ಸಮಾವೇಶ: ಕಿತ್ತೂರ

ಜ.12ಕ್ಕೆ ಬಣಗಾರ ಸಮಾಜದ ವಧು-ವರರ ಸಮಾವೇಶ: ಕಿತ್ತೂರ

ಬೆಳಗಾವಿ
ಲಿಂಗಾಯತ ಬಣಗಾರ ಸಮಾಜದ ವತಿಯಿಂದ ಜ.12 ರಂದು ಇಲ್ಲಿನ ನೆಹರು ನಗರದಲ್ಲಿನ ಡಾ. ಬಿ.ಎಸ್‌.ಜಿರಗೆ ಸಭಾಂಗಣದಲ್ಲಿ 8ನೇ ಅಖಿಲ ಭಾರತ ಮಟ್ಟದ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಬಣಗಾರ ವಧು-ವರರ ಸಮಾವೇಶದ ಅಧ್ಯಕ್ಷ ಹೇಮಂತ ಕಿತ್ತೂರು ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರತಿ ಎರಡೂ ವರ್ಷಕ್ಕೊಮ್ಮೆ ಭಾರತ ಮಟ್ಟದ ಲಿಂಗಾಯತ ಬಣಗಾರ ಸಮಾಜದ ವಧು-ವರರ ಸಮಾವೇಶ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಈಗಾಗಲೇ ಸುಮಾರು 200ಕ್ಕೂ ಅಧಿಕ ವಧು-ವರರು ನೋಂದಣಿ ಮಾಡಿಸಿದ್ದಾರೆ‌. ನಮ್ಮ ಸಮಾಜದ ಬಡವರಿಗೆ ಈ ವಧು-ವರರ ಸಮಾವೇಶ ಅನುಕೂಲವಾಗಲಿದೆ ಎಂದರು.
ವಧು-ವರರ ಸಮಾವೇಶಕ್ಕೆ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ಜನರು ಆಗಮಿಸುವ ನಿರೀಕ್ಷೆ ಇದೆ‌. ಮದ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಇದರ ಲಾಭವನ್ನು ನಮ್ಮ ಸಮಾದವರು ಪಡೆದುಕೊಳ್ಳಬೇಕು ಎಂದರು.
ಮಹಾಂತೇಶ ಊರೊಳಗಿನ, ಬಾಲಚಂದ್ರ ಉಮದಿ, ಸೋಮನಾಥ ಕೊಳಚಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Total Views 43
RELATED ARTICLES

Most Popular

Recent Comments

KNN City News
Home
E-Paper