Monday, November 23, 2026
HomeBelagaviಯಾರೂ ದರೋಡೆಕೋರರು ಎನ್ನುತ್ತಿದ್ದಾರೋ ಅವರೇ ದರೋಡೆಕೋರರು: ಖಂಡ್ರೆ

ಯಾರೂ ದರೋಡೆಕೋರರು ಎನ್ನುತ್ತಿದ್ದಾರೋ ಅವರೇ ದರೋಡೆಕೋರರು: ಖಂಡ್ರೆ

ಬೆಳಗಾವಿ
ಯಾರೂ ದರೋಡೆಕೋರರು ಎನ್ನುತ್ತಾರೋ ಅವರೇ ದರೋಡೆಕೋರರು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವಿಪಕ್ಷ ನಾಯಕ ಆರ್. ಅಶೋಕ ವಿರುದ್ಧ ವಾಗ್ದಾಳಿ ನಡೆಸಿದರು.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ದರೋಡೆಕೋರರ ಸರಕಾರ ಎಂಬ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರೂ ದರೋಡೆಕೋರರು ಎನ್ನುತ್ತಿದ್ದಾರೋ ಅವರೇ ದರೋಡೆಕೋರರು. ಅವರೇ ಗಲಭೆ ಮಾಡೋದು, ಅವರೇ ದೂರು ಕೊಡುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಐತಿಹಾಸಿಕ ಸಮಾವೇಶ ಬೆಳಗಾವಿಯಲ್ಲಿ‌ ನಡೆಯುತ್ತಿದೆ. ಮನಮೋಹನ್ ಸಿಂಗ್ ಅಕಾಲಿಕ ನಿಧನದಿಂದ ಗಾಂಧಿ ಭಾರತ್ ಸಮಾವೇಶ ಮುಂದೂಡಲಾಯಿತು. ಆದರೆ ಜ.21ರಂದು ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಸಮಾವೇಶ ಅರ್ಥಪೂರ್ಣವಾಗಿದೆ ಎಂದರು.
ದೇಶದಲ್ಲಿ ಕೇಂದ್ರ ಸರಕಾರ ಬಂಡವಾಳ ಶಾಹಿಗಳಿಗೆ ಮನ್ನಣೆ ನೀಡುತ್ತಿದೆ. ಅಲ್ಪಸಂಖ್ಯಾತರು, ದಲಿತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ.‌ ಇದನ್ನು ಹೋಗಲಾಡಿಸಬೇಕು. ಬದಲಾವಣೆ ತರಲು ಕಾಂಗ್ರೆಸ್ ಹೋರಾಟ ನಡೆಸಿದೆ ಎಂದರು.
ದೇಶದ ಅಭಿವೃದ್ಧಿಯ ಬಗ್ಗೆ ಮತ್ತೇ ಬದಲಾವಣೆ ತರಲು ನಾವೆಲ್ಲರೂ ಸಂಘಟಿತರಾಗಿ ಆಂದೋಲನ ಮಾಡಿ ಜನರ ಪರವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಸಿದ್ಧರಾಗಬೇಕಿದೆ ಎಂದರು.
ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಣಮುಖರಾಗುತ್ತಿದ್ದಾರೆ. ಅವರು ಲವಲವಿಕೆಯಿಂದ ಇದ್ದಾರೆ. ಮತ್ತೇ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡಲಿದ್ದಾರೆ ಎಂದರು.

 

Total Views 48
RELATED ARTICLES

Most Popular

Recent Comments

KNN City News
Home
E-Paper