Monday, November 23, 2026
HomeBelagaviಯತ್ನಾಳ ಉಚ್ಚಾಟನೆ ಮಾಡಿದ್ದು ಸರಿಯಲ್ಲ: ಶ್ರೀಗಳು

ಯತ್ನಾಳ ಉಚ್ಚಾಟನೆ ಮಾಡಿದ್ದು ಸರಿಯಲ್ಲ: ಶ್ರೀಗಳು

ಬೆಳಗಾವಿ
ಉತ್ತರ ಕರ್ನಾಟಕ ಅಭಿವೃದ್ಧಿ ಹರಿಕಾರ, ಹಿಂದುತ್ವದ ನಾಯಕ ಯತ್ನಾಳ್ ಅವರನ್ನು ಕೆಲವರು ಕುತಂತ್ರ ಮಾಡಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಖಂಡನೀಯ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ ಶ್ರೀ ಬಸವ ಜಯಮೃತ್ಯುಂಜಯ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಲಿಂಗಾಯತ ನಾಯಕತ್ವ ಬೆಳೆಯುತ್ತಿದೆ. ಹಿಂದುತ್ವದ ಕೂಗು ಅಡಗಿಸಲು. ಈ ರಾಜ್ಯದ ಜನ ಅವರನ್ನು ಮುಖ್ಯಮಂತ್ರಿ ಆಗಿ ನೋಡಬೇಕು. ನಾಯಕತ್ವ ಕುಗ್ಗಿಸಲು ಬಿಜೆಪಿ ಒಳಗೆ ಇರುವ ಕೆಲವರು ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗೆ ದೊಡ್ಡ ವೋಟ್ ಬ್ಯಾಂಕ್ ಪಂಚಮಸಾಲಿ ಸಮುದಾಯ. ಮೀಸಲಾತಿ ಕೊಡದಿದ್ದಕ್ಕೆ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿದ್ದೇವು. ಆದರೆ ಕಾಂಗ್ರೆಸ್ ನವರು ಲಾಠಿ ಏಟು ಬೂಟಿನೇಟು ನೀಡಿದರು. ಇದನ್ನು ನೋಡಿದ ನಮ್ಮ ಸಮುದಾಯ ಮತ್ತೆ ಬಿಜೆಪಿಯತ್ತ ವಾಲಿತ್ತು. ನಮ್ಮ ನಾಯಕನ ಧ್ವನಿ ಅಡಗಿಸಿದ ಬಿಜೆಪಿಗೆ ಸಪೋರ್ಟ್ ಮಾಡಬೇಕಾ ಎನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ. ಲಿಂಗಾಯತ ನಾಯಕರ ತುಳಿಯುವ ನಾಯಕರ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ನಮ್ಮದು ಅಮಿತ್ ಶಾ, ಮೋದಿಯವರ ವಿರುದ್ಧ ಹೋರಾಟ ಅಲ್ಲ. ನಮ್ಮ ಸಮಾಜದ ವೋಟ್ ಪಡೆದ ಶಾಸಕರು ಮೋದಿಯವರ ಮನವೊಲಿಸಿ ಕೂಡಲೇ ಆದೇಶ ಹಿಂಪಡೆಯಬೇಕು, ಇಲ್ಲವಾದರೆ ನಿಮ್ಮ ಕಾಲ ಮೇಲೆ ನೀವು ಕಲ್ಲು ಹಾಕೋಬೇಡಿ ಎಂದು ಎಚ್ಚರಿಕೆ ನೀಡಿದರು.
ಈಗಷ್ಟೇ ಯತ್ನಾಳ್ ಅವರ ಜೊತೆಗೆ ನಾನು ಮಾತನಾಡಿದ್ದೇನೆ. ಇದು ಮೊದಲ ಸಲ ಅಲ್ಲಾ ಈ ಹಿಂದೆಯೂ ಆಗಿದೆ. ಅವರು ಗಟ್ಟಿಯಾಗಿದ್ದಾರೆ ಸ್ವಲ್ಪ ಮನಸ್ಸಿಗೆ ನೋವಾಗಿದೆ. ಮೀಸಲಾತಿಗೆ ವಿರೋಧ ಮಾಡಿದವರೇ ಇಂದು ಉಚ್ಚಾಟನೆಗೆ ಕಾರಣ ಎಂದು ಪರೋಕ್ಷವಾಗಿ ಯಡಿಯೂರಪ್ಪ ಕುಟುಂಬ ಕಾರಣ ಎಂದರು.
ಕುತಂತ್ರಕ್ಕೆ ಒಳಪಟ್ಟು ಶಿಸ್ತು ಪಾಲನಾ ಸಮಿತಿ ಈ ರೀತಿ ಕೆಲಸ ಮಾಡಿದ್ದಾರೆ. ಅಮಿತ್ ಶಾ, ಮೋದಿಯವರ ಗಮನಕ್ಕೆ ಇದು ಬಂದಿಲ್ಲ. ಉತ್ತರ ಕರ್ನಾಟಕ ಲಿಂಗಾಯತ ನಾಯಕರನ್ನ ತುಳಿಯಬೇಕು. ಕರ್ನಾಟಕದ ಲಿಂಗಾಯತ ನಾಯಕರು ಒಂದೇ ಕುಟುಂಬದವರು ಅಂತಾ ಬಿಂಬಿಸಿಕೊಂಡಿದ್ದಾರೆ. ಇದರಿಂದ ಪಕ್ಷಕ್ಕೆ ದೊಡ್ಡ ಮಟ್ಟದ ಡ್ಯಾಮೇಜ್ ಆಗಿದೆ. ಯಡಿಯೂರಪ್ಪ ಅವರಿಗೆ ಒಂದು ಸಂದರ್ಭ ಇತ್ತು ಬೆಂಬಲಿಸಿದ್ದಾರೆ. ಬಸನಗೌಡರಿಗೆ ನಾಯಕತ್ವ ಕೊಡಬೇಕು ಅಂತಾ ಜನ ಚಿಂತನೆ ಮಾಡಿತ್ತು. ಕುಟುಂಬ ನಂಬಿ ಪಕ್ಷ ಕಟ್ಟುತ್ತೀರಾ ಅಥವಾ ಜನ ಸಾಮಾನ್ಯರ ನಂಬಿ ಪಕ್ಷ ಕಟ್ಟುತ್ತಿರಾ ಎಂದು ಪ್ರಶ್ನಿಸಿದರು.
ಬೀದರ್ ದಿಂದ ಚಾಮರಾಜನಗರ ವರೆಗೂ ಹೋರಾಟಕ್ಕೆ ಕರೆ ಕೊಡಬೇಕು ಅಂತಾ ಇದೆ. ಗೌಡ್ರೂ ಪಂಚಮಸಾಲಿ ಸಮಾಜಕ್ಕೆ ಸೀಮಿತ ಅಲ್ಲಾ ಬೇರೆ ಜಾತಿಯವರ ಬೆಂಬಲ ಇದೆ ಎಂದರು.

Total Views 90
RELATED ARTICLES

Most Popular

Recent Comments

KNN City News
Home
E-Paper