
ಬೆಳಗಾವಿ
ದೇವಸ್ಥಾನ ಸ್ವಚ್ಛತಾ ಕೆಲಸ ಬಿಟ್ಟು ಕೊಡುವ ವಿಚಾರಕ್ಕೆ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ನಡೆದ ಘಟನೆ ಭಾನುವಾರ ನಡೆದಿದೆ.
ಗಲಾಟೆಯಲ್ಲಿ ಇಬ್ಬರಿಗೆ ಗಂಭಿರವಾಗಿ ಗಾಯವಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಾದ್ದಾರೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆಎಚ್ ಗ್ರಾಮದಲ್ಲಿ ಗಲಾಟೆ ನಡೆದಿದೆ. ಪ್ರತಿ ವರ್ಷ ಯುಗಾದಿ ಹಬ್ಬಕ್ಕೆ ಇಡೀ ಗ್ರಾಮದ ಎಲ್ಲ ದೇವಸ್ಥಾನದ ಸ್ವಚ್ಛತೆ ಮಾಡುವ ಕೆಲಸ ಬದಲಾಗಬೇಕಿತ್ತು. ಕಾಂಬಳೆ ಕುಟುಂಬಕ್ಕೆ ನೀಡಬೇಕಿದ್ದನ್ನು ಬೇರೆಯವರಿಗೆ ಕೊಟ್ಟಿದ್ದ ಗ್ರಾಮಸ್ಥರು. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಹಲವರಿಂದ ಕಾಂಬಳೆ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಗಲಾಟೆಯಲ್ಲಿ ಮೋಹನ್ ಕಾಂಬಳೆ, ರಾಧಾಕೃಷ್ಣ ಕಾಂಬಳೆಗೆ ಗಂಭಿರವಾಗಿ ಗಾಯವಾಗಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
