
ಬೆಳಗಾವಿ
ಹತ್ತಾರು ದೇವರುಗಳಿಗೆ ಹರಕೆ ಹೊತ್ತು ಗಂಡು ಮಗನ ಕೊಡು ಎಂದು ಹೆತ್ತವರು ಹಡೆದ ಗಂಡು ಮಗ ಅನಾರೋಗ್ಯದಲ್ಲಿದ್ದ ತಂದೆಯನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ನಿಧನದ ನಂತರವೂ ಅಂತ್ಯಸಂಸ್ಕಾರ ಮಾಡದೆ ಮರೆ ಮಾಚಿಕೊಂಡ ಘಟನೆ ನಡೆದಿದೆ.
ಸತೀಶ್ವರ ಸಿನ್ಹಾ 62 ವರ್ಷದ ಇಳಿ ವಯಸ್ಸಿನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಗೋವಾದಲ್ಲಿ ಮನೆ ಮಾಡಿಕೊಂಡಿದ್ದ ಮಗ ಅನಿವಾರ್ಯ ಎನ್ನುವಂತೆ ಬಂದು ಅನಾರೋಗ್ಯ ಪೀಡಿತ ತಂದೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ನಂತರ ತಂದೆ ಹೆಣವಾದರೂ ಕೊಳ್ಳಿ ಇಡಲು ಬರದ ಗಂಡು ಮಗ ತನ್ನ ಕರ್ತವ್ಯದಿಂದ ವಿಮುಖನಾದರೆ, ಹೆತ್ತವರ ಹರಕೆ ಇಲ್ಲದೆ ಹೆಣ್ಣಾಗಿ ಹುಟ್ಟಿದ್ದ ಮಗಳು ನಿಧಿ ಕೊನೆಯಲ್ಲಿ ತಂದೆಯ ಅಂತಿಮ ಸಂಸ್ಕಾರ ಪೂರೈಸಿ ತನ್ನ ಕರ್ತವ್ಯ ಪಾಲನೆ ಮಾಡಿ ಗಂಡು ಸಂತಾನದ ದುರಂತ ಘಟನೆ ಬೆಳಗಾವಿ ನಗರದಲ್ಲಿ ಕರಳು ಕಿತ್ತು ಬರುವ ಘಟನೆಯಾಗಿ ಪರಿಣಮಿಸಿದೆ.
