
ಬೆಳಗಾವಿ
ಕಳೆದ ಸೆ.1 2024 ರಂದು ಪಂಢರಪುರಕ್ಕೆ ಹೋಗಿ ಬರುವ ರೂಢಿ ಬೆಳೆಸಿಕೊಂಡಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನು ನಿನ್ನೆ ಪ್ರೇಮಿಗಳ ಕಣ್ಣಿಗೆ ಅಸ್ತಿ ಪಂಜರ ಕಂಡು ಪೊಲೀಸರಿಗೆ ತಿಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಖಾನಾಪುರ ತಾಲೂಕಿನ ಜಾಡಹಗಲಿ ಮಾರುತಿ ಪಣೇರಿ ಉಸುಳ್ಕರ್ (74) ವೃದ್ಧ ಕಳೆದ ಸೆ.1 ರಂದು ಕಾಣೆಯಾಗಿದ್ದರು. ಆದರೆ ಅವರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿರಲಿಲ್ಲ. ನಿನ್ನೆ ಪ್ರೇಮಿಗಳು ಸುತ್ತಾಡವ ಸಮಯದಲ್ಲಿ ಭೂತನಾಥ ಗುಡ್ಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಾರುತಿ ಅಸ್ತಿಪಂಚರ ಕಂಡು ಭಯದಿಂದ ಪೊಲೀಸರಿಗೆ ತಿಳಿಸಿದ್ದಾರೆ.
ಛತ್ರಿ, ಗಾಂಧಿ ಟೋಪಿ, ಸ್ವೀಟರ್, ಆತನ ಚಪ್ಪಲಿ, ಪಂಢರಪುರದ ಮಾಲೆ, ಚಸ್ಮಾ ನೋಡಿ ಆತ್ಮಹತ್ಯೆ ಮಾಡಿಕೊಂಡ ವೃದ್ಧನ ಮನೆಯವರು ಪತ್ತೆ ಹಚ್ಚಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
