
ಬೆಳಗಾವಿ
ಕೊಟ್ಟೂರು ಚಾಣುಕೋಟಿ ಮಠದ ಶ್ರೀ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಶಷ್ಠಿ ಸಂಭ್ರಮ. ಈ ಸಂಭ್ರಮದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಹುಕ್ಕೇರಿ ಹಿರೇಮಠದ ಗೌರವ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಶ್ರೀಗಳು, ಕೊಟ್ಟೂರು ಚಾಣುಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಪಂಚಪೀಠಗಳ ಬಗ್ಗೆ ಅಪಾರವಾದ ಗೌರವನ್ನು ಇಟ್ಟುಕೊಂಡು ಕಾರ್ಯ ಮಾಡಿದವರು. ಕೊಟ್ಟೂರಿನಲ್ಲಿ ಏನೂ ಇಲ್ಲದ ಮಠಕ್ಕೆ ಎಲ್ಲವನ್ನೂ ಮಾಡಿ ಏನೂ ಮಾಡದಂತೆ ಇರುವ ಒಬ್ಬ ಅಪರೂಪದ ಸ್ವಾಮೀಜಿ ಎಂದರೆ ತಪ್ಪಾಗಲಾರದು. ಇವರು ಕಟ್ಟಿದ ಶಿಕ್ಷಣ ಸಂಸ್ಥೆಯಲ್ಲಿ ಸಾಕಷ್ಟು ಜನ ಓದಿದ್ದಾರೆ. ಅಷ್ಟೇ ಅಲ್ಲದೆ ವಸತಿಯನ್ನು ಪಡೆದು ಸಾಕಷ್ಟು ಬಡ ಮಕ್ಕಳು ಉನ್ನತ ಹುದ್ದೆಯಲ್ಲಿದ್ದಾರೆ. ಇಂಥ ಪರಮಪುಜ್ಯರು ಷಷ್ಠಿ ಸಂಭ್ರಮದಲ್ಲಿ ಶ್ರೀ ಪಂಚಾಚಾರ್ಯರ ಯುಗಮಾನೋತ್ಸವವನ್ನು ಆಚರಿಸುವುದರ ಮೂಲಕ ಬಹಳಷ್ಟು ಅಪರೂಪದ ಕಾರ್ಯವನ್ನು ಮಾಡಿದ್ದಾರೆ ಎಂದರು.
*ಕೊಟ್ಟೂರು ಶ್ರೀಗಳ ಕಾರ್ಯಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ*
ಕೊಟ್ಟೂರಿನ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಬಹಳಷ್ಟು ಸರಳತೆಯಿಂದ ತಮ್ಮ ಬದುಕನ್ನು ಸಾಗಿಸಿಕೊಂಡು ಇವತ್ತು ಸದ ಸ್ವಾಮಿ ಎಂದರೆ ಜನರ ಮಟ್ಟವನ್ನು ಕಟ್ಟಬೇಕು. ಜನರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು.ಇಂಥ ಸ್ವಾಮೀಜಿ ಅವರು ನಮ್ಮ ಜಿಲ್ಲೆಯಲ್ಲಿ ಇದ್ದಾರೆ ಎನ್ನುವುದು ಹೆಮ್ಮೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗೌರವವನ್ನು ಸ್ವೀಕರಿಸಿ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲಾ ಕಾರ್ಯದ ಹಿಂದೆ ಉಜ್ಜಯಿನಿ ಮಹಾ ತಪಸ್ವಿ ಸಿದ್ದಲಿಂಗ ಜಗದ್ಗುರುಗಳ ಹಾಗೂ ಕೊಟ್ಟೂರು ಬಸವೇಶ್ವರರ ಪ್ರೇರಣೆ ಇದೆ ಎಂದು ಮಾತನಾಡಿದ ಅವರು, 60 ವರ್ಷಗಳವರೆಗೆ ನಮ್ಮನ್ನು ಪ್ರೀತಿಸಿದ ಎಲ್ಲ ಸಂಪ್ರದಾಯದ ಸ್ವಾಮೀಜಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶ್ರೀ ಉಜ್ಜಯಿನಿ ಜಗದ್ಗುರುಗಳು, ಶ್ರೀ ಶ್ರೀಶೈಲ ಜಗದ್ಗುರುಗಳು, ಶ್ರೀ ಕಾಶಿಯ ಹಿರಿಯ ಜಗದ್ಗುರುಗಳು, ಶ್ರೀ ಕಾಶಿಯ ಕಿರಿಯ ಜಗದ್ಗುರುಗಳು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಶುಭಾಷಯ ಕೊರಿ ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ವಿಭೂತಿ ಮಠದ ಶ್ರೀಗಳು, ಕೆರೂರಿನ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಸಿಂಧಗಿಯ ಪರಮಪುಜ್ಯರು, ಶಿವಗಂಗೆಯ ಶ್ರೀಗಳು ಸೇರಿದಂತೆ ನೂರಾರು ಜನ ಶಿವಾಚಾರ್ಯರು ಉಪಸ್ಥಿತರಿದ್ದರು.
ತಾಲೂಕಿನ ಶಾಸಕರು, ಗಣ್ಯಮಾನ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
