
ಬೆಳಗಾವಿ
ಕಳೆದ 60 ವರ್ಷಗಳ ಹಿಂದೆ ಹಿರೇಬಾಗೆವಾಡಿ ಗ್ರಾಮದಲ್ಲಿ ಸರಕಾರಿ ಆಸ್ಪತ್ರೆ ನಿರ್ಮಾಣಕ್ಕೆ ದಲಿತರ ಜಾಗ ಪಡೆದುಕೊಂಡವರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶದ ಮೆರೆಗೆ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಕಾರು ಜಪ್ತ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಫಕೀರಪ್ಪ ದುರ್ಗಪ್ಪ ತಳವಾರ 31 ಗುಂಟೆ, ಮಲ್ಲಿಕಾರ್ಜುನ ತಳವಾರ 1 ಎಕರೆ 2 ಗುಂಟೆ, ಅಶೋಕತಾಯಿ ತಳವಾರ 30 ಗುಂಟೆ ಸರ್ವೆ ನಂಬರ್ 125/2ಬಿ ಹಿರೇಬಾಗೇವಾಡಿಯಲ್ಲಿ 1894ರ ಬ್ರಿಟಿಷ್ ಕಾಯ್ದೆ ಅನುಸರಿಸಿ ಜಾಗ ಭೂಸ್ವಾಧೀನ ಪಡೆಸಿಕೊಂಡು ಇಲ್ಲಿಯವರೆಗೂ ಆರೋಗ್ಯ ಇಲಾಖೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿರಲಿಲ್ಲ. ನ್ಯಾಯಾಲಯದ ಅನುಮತಿ ಪಡೆದು ಆರೋಗ್ಯ ಇಲಾಖೆಯ ಕಾರ್ ಜಪ್ತಿ ಮಾಡಲು ಬಂದಾಗ ಕಾರ್ ತೆಗೆದುಕೊಂಡು ಪರಾರಿಯಾಗಿದ್ದ ಸಿಬ್ಬಂದಿ ಮೇಲೆ ವಕೀಲರ ತರಾಟೆಗೆ ತೆಗೆದುಕೊಂಡರು.
ನಾವು ಬಂದಾಗ ಕಾರ್ ಇಲ್ಲಿಯೇ ಇತ್ತು. ಈಗ ಏಕಾಏಕಿ ತೆಗೆದುಕೊಂಡು ಹೋಗಿ ಕೋಟ್೯ಗೆ ಅವಮಾನ ಮಾಡುತ್ತಿರಾ ಎಂದು ಅವಾಜ್ ಹಾಕಿದ ಕೂಡಲೇ ಕಾರ್ ಕೀ ತಂದು ಕಕ್ಷಿದಾರರ ಪರ ವಕೀಲ ಆರ್.ಎನ್.ಪಾಟೀಲ್ ಅವರ ಕೈಗೆ ಕೊಟ್ಟರು.
