
ಬೆಳಗಾವಿ
ವಿವಾಹಿತೆಗೆ ಪ್ರೀತ್ಸೆ ಪ್ರೀತ್ಸೆ ಎಂದು ಕಳೆದೊಂದು ತಿಂಗಳಿನಿಂದ ಹಿಂದೆ ಬಿದ್ದಿದ್ದ ಎರಡೂ ಮಕ್ಕಳ ಅಂಕಲ್ ಒಬ್ಬ ಇಟ್ಟಂಗಿ ಭಟ್ಟಿಯ ಕೆಲಸಕ್ಕೆ ಹೋದ ಸಂದರ್ಭದಲ್ಲಿ ವಿವಾಹಿತೆ ಹಾಗೂ ಆಕೆಯ ಗಂಡನಿಗೆ ಕಣ್ಣಿಗೆ ಕಾರದ ಪುಡಿ ಎರಚಿ ಹಲ್ಲೆ ಮಾಡಿದ ಘಟನೆ ಖಾನಾಪುರ ತಾಲೂಕಿನ ಇದ್ದಲಹೊಂಡ ಗ್ರಾಮದಲ್ಲಿ ನಡೆದಿದೆ.
ನಿನಗೆ ಎಷ್ಟು ಲಕ್ಷ ಬೇಕು ಕೇಳು ನಾನು ನಿನಗೆ ಹಣ ಕೊಡುತ್ತೇನೆ ನಿನ್ನ ಗಂಡನ ಬಿಟ್ಟು ನನ್ನ ಜೊತೆಗೆ ಬರುವಂತೆ ಉಪೇಂದ್ರ ನಟನೆಯ ಪ್ರೀತ್ಸೆ ಸಿನಿಮಾ ಸ್ಟೈಲ್ ನಲ್ಲಿ ಕಾಡುತ್ತಿದ್ದ ಅಂಕಲ್ ಇಂದು ಇಟ್ಟಂಗಿ ಭಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಕಾಜಲ ಹಾಗೂ ಆಕೆಯ ಗಂಡ ಕಣ್ಣಿಗೆ ಕಾರದ ಪುಡಿ ಎರಚಿ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.
ಮೂಲತಃ ಹುಕ್ಕೇರಿ ತಾಲೂಕಿನ ರಚಕಟ್ಟಿ ಗ್ರಾಮದ ಕಾಜಲ ಮಲ್ಲಪ್ಪ ಪೂಜಾರಿ ಹಾಗೂ ಮಲ್ಲಪ್ಪ ಪೂಜಾರಿ ಕಣ್ಣಿಗೆ ಕಾರದ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ.
ಕಳೆದೊಂದು ತಿಂಗಳನಿಂದ ಹುಕ್ಕೇರಿ ತಾಲೂಕಿನ ರಚ್ಚಕಟ್ಟಿ ಗ್ರಾಮದ ಲಗಮಪ್ಪ ಎಂಬ ವಿವಾಹಿತ ವ್ಯಕ್ತಿ ಕಾಜಲಗೆ ಪ್ರೀತಿ ಮಾಡುವಂತೆ ಸತಾಯಿಸುತ್ತಿದ್ದ ಇದಕ್ಕೆ ನಿರಾಕರಣೆ ಮಾಡಿದ ಕಾಜಲ ಹಾಗೂ ಆಕೆಯ ಗಂಡ ಮಲ್ಲಪ್ಪನ ಮೇಲೆ ಇಟ್ಟಂಗಿ ಬಟ್ಟೆಯ ಕೆಲಸಕ್ಕೆ ಹೋದಾಗ ಮಲ್ಲಪ್ಪ ಪೂಜಾರಿ, ಮಲ್ಲೇಶ ಪೂಜಾರಿ, ಲಗಮೇಶ್ ಪೂಜಾರಿ, ಸಿದ್ದವ್ವ ಪೂಜಾರಿ, ಕರೆವ್ವ ಪೂಜಾರಿ, ಲಕ್ಕವ್ವ ಪೂಜಾರಿ ಹಾಗೂ ಸಿದ್ದವ್ವ ಪೂಜಾರಿ ಎಂಬ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
