
ಬೆಳಗಾವಿ
ನಗರದ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಅವರ 76ನೇ ಹುಟ್ಟು ಹಬ್ಬಕ್ಕೆ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಹುಕ್ಕೇರಿ ಹಿರೇಮಠದ ಗೌರವವನ್ನು ನೀಡಿ ಗೌರವಿಸಿ, ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಎಂದರೆ ಎಲ್ಲರಿಗೂ ಬೇಕಾದವರು. ಎಲ್ಲಾ ಸಂಪ್ರದಾಯದವರೊಂದಿಗೆ, ಎಲ್ಲಾ ಸಮುದಾಯದೊಂದಿವೆ ಅವಿನಾಭಾವ ಸಂಬಂಧ ಇಟ್ಟುಕೊಂಡು ಹೋಗಿರುವ ಶ್ರೀಗಳು ಅವರ 75ಜನ್ಮ ದಿನದ ಅಮೃತ ಮಹೋತ್ಸವವನ್ನು ಬೆಳಗಾವಿಯಲ್ಲಿ ಎಲ್ಲಾ ಸಮುದಾಯದ ಭಕ್ತರು ಆಚರಿಸುವುದರ ಮೂಲಕ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸಿರುವುದು ಶ್ರೀಗಳ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದರು.
ಶ್ರೀಗಳು ನಾಗನೂರಿನ ಶತಾಯುಷಿ, ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶಿವಬಸವ ಸ್ವಾಮೀಜಿಗಳಂತೆ ಶತಾಯುಷಿಗಳಾಗಲಿ ಎಂದು ಪ್ರಾರ್ಥಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಎಲ್ಲಾ ಭಕ್ತರ ಪ್ರೀತಿ ಇಷ್ಟಕ್ಕೆಲ್ಲ ಕಾರಣ. ನನಗೆ ಅನುಗ್ರಹ ನೀಡಿದ ನಿಡಸೋಸಿ ಜಗದ್ಗುರುಗಳ ಅಧಿಕಾರವನ್ನು ನೀಡಿರುವ ನಾಗನೂರು ರುದ್ರಾಕ್ಷಿಮಠದ ಲಿಂಗೈಕ್ಯ ಶಿವಬಸವ ಸ್ವಾಮೀಜಿ ಅವರ ಕೃಪೆಯೇ ಇಷ್ಟಕ್ಕೆಲ್ಲ ಕಾರಣ ಎಂದರು.
