
ಬೆಳಗಾವಿ
ಶಾಸಕ ಆಸೀಫ್ ಸೇಠ್ ಪುತ್ರನ ಆರತಕ್ಷತೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಖಾಮುಖಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಶಾಸಕ ಆಸೀಫ್ ಸೇಠ್ ಪುತ್ರನ ಆರಕ್ಷೆತೆಗೆ ಬಂದಿದ್ದ ಸಿಎಂ ಹಳೆ ಶಿಷ್ಯನ ಕಂಡು ಖುಷಿಯಾದರು. ರಮೇಶ್ ಹೆಗಲು ಮುಟ್ಟಿ ಎನಯ್ಯಾ ರಮೇಶ್ ಚೆನ್ನಾಗಿದ್ದೀಯಾ ಎಂದು ಅಕ್ಕರೆಯಿಂದ ಮಾತಾಡಿಸಿದರು. ಈ ವೇಳೆ ಎ ಸಾಹುಕಾರ್ ಎಂದು ಮಾತಾಡಿದ ಸಚಿವ ಜಮೀರ್ ಅಹಮ್ಮದ್ ಖುಷಿ ಖುಷಿಯಿಂದ ಮಾತನಾಡಿದರು.
