Monday, November 23, 2026
HomeBelagaviನಾಳೆ ಬೆಳಗಾವಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಪಿ.ರಾಜೀವ

ನಾಳೆ ಬೆಳಗಾವಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಪಿ.ರಾಜೀವ

ಬೆಳಗಾವಿ

ರಾಜ್ಯದಲ್ಲಿ ಕರ್ನಾಟಕ ಸರಕಾರ ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿಯಿಂದ ಆಚರಿಸುವ ಜನಾಕ್ರೋಶ ಯಾತ್ರೆ ಏ.16 ರಂದು ಬೆಳಗಾವಿಯಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ ಹೇಳಿದರು.
ಮಂಗಳವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯ ಜನಾಕ್ರೋಶ ಯಾತ್ರೆ ಜನರ ಧ್ವನಿಯಾಗಿ ಹೋರಾಟ ನಡೆಸುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹಾಲಿ, ಮಾಜಿ ಶಾಸಕರು ಆಗಮಿಸಲಿದ್ದಾರೆ ಎಂದರು.
ದೇಶದಲ್ಲಿ ಅತೀ ಹೆಚ್ಚು ಹಣ ದುಬ್ಬರವಾಗಿದ್ದು ಕರ್ನಾಟಕ ರಾಜ್ಯದಲ್ಲಿ. ಆರ್ಥಿಕವಾಗಿ ನಿರ್ವಹಣೆ ಮಾಡುವಲ್ಲಿ ಸಿಎಂ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದರು.
ಕೋವಿಡ್ ಬಳಿಕ ‌ನಿರಂತರವಾಗಿ ಆರ್ಥಿಕ ಸುಧಾರಣೆ ಹೊಂದಿದ್ದ ರಾಜ್ಯವನ್ನು 2023-24ರ ಆಯವ್ಯಯದಲ್ಲಿ ರಾಜ್ಯ ತೆರಿಗೆ ಆಯೋಗ ಎಂದು ಇರುತ್ತದೆ. ರಾಜ್ಯ ತೆರಿಗೆ, ಕೇಂದ್ರ ತೆರಿಗೆ 15ನೇ ಹಣಕಾಸು ಆಯೋಗದಿಂದ ಪ್ರಕಾರ ಅನುದಾನ ಬರುತ್ತಿದೆ. ಆದರೆ ಸರಕಾರ ತೆರಿಗೆ ಗುರಿಯನ್ನು ತಲುಪಲು ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಣದುಬ್ಬರ ಹೆಚ್ಚಳವಾಗಲು ಸರಕಾರದ ವೈಫಲ್ಯವೇ ಕಾರಣ. ಸ್ನಾನ ಮಾಡುವ ನೀರಿನಿಂದ ಹಿಡಿದು 48 ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆ ಮಾಡಿದ ಮೇಲೂ ಕರ್ನಾಟಕದ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ ಎಂದು ಆರೋಪಿಸಿದರು.
ಈ ಹಿಂದಿನ ಸರಕಾರಗಳು ಕಾಪಾಡಿಕೊಂಡು ಬಂದಿದ್ದ ಸರಕಾರಿ ಇಲಾಖೆಗಳನ್ನು ದಿವಾಳಿಗೆ ತರುವ ಶ್ರೇಯಸ್ಸು ಈಗೀನ ಕರ್ನಾಟಕ ಸರಕಾರ ಮಾಡಿದೆ. ಶಕ್ತಿ ಯೋಜನೆಯಲ್ಲಿ ಸಾರಿಗೆ ಬಸ್ ಪ್ರಯಾಣ ಉಚಿತ ಮಾಡಿ 7 ಸಾವಿರ ಕೋಟಿ ನಷ್ಟವಾಗಿದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರೇ ಮಾಹಿತಿ ನೀಡಿದ್ದಾರೆ ಎಂದರು.
ಕೆಪಿಟಿಸಿಎಲ್ ಆಸ್ತಿ ಮಾರಾಟ ಮಾಡುವ ಹುನ್ನಾರ ನಡೆಸಿದ್ದಾರೆ. 20 ಸಾವಿರ ಕೋಟಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಬೆಳಗಾವಿಯ ಪ್ರಭಾವಿ‌ ಸಚಿವರೊಬ್ಬರ ಭೂ ಹರಣದ ದಾಖಲೆ ಬಿಡುಗಡೆ ಮಾಡುವ ಪ್ರಶ್ನೆ ಉತ್ತರಿಸಿದ ಅವರು, 30% ದಾಖಲೆ ಸಂಗ್ರಹ ಮಾಡಲಾಗಿದೆ. ದಾಖಲೆ ಸಂಗ್ರಹಿಸಿದ ಬಳಿಕ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ನಗರ ಪಾಟೀಲ್, ಮಾಜಿ ವಿಧಾನ ಪರಿಷತ್ತಿನ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ್, ಪಾಲಿಕೆ ಸದಸ್ಯ ಹನುಮಂತ ‌ಕೊಂಗಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Total Views 225
RELATED ARTICLES

Most Popular

Recent Comments

KNN City News
Home
E-Paper