
ಬೆಳಗಾವಿ
ಜಾತ್ರೆಯಲ್ಲಿ ಆಯೋಜನೆ ಮಾಡಿದ್ದ ಎತ್ತಿನಗಾಡಿ ಷರತ್ತಿನ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾ ಮಾರಿ ನಡೆದ ಘಟನೆ ಮಂಗಳವಾರ ಹುಕ್ಕೇರಿ ತಾಲೂಕಿನ ಮಾವನೂರು ಗ್ರಾಮದಲ್ಲಿ ನಡೆದಿದೆ.
ಮಾವನೂರು ಗ್ರಾಮದ ಬಂಡೆಮ್ಮನ ದೇವಿ ಜಾತ್ರಾ ನಿಮಿತ್ಯವಾಗಿ ಆಯೋಜನೆ ಮಾಡಿದ್ದ ಎತ್ತಿನ ಚಕ್ಕಡಿಯ ಷರತ್ತಿನಲ್ಲಿ ಗೋಪಾಲ್ ಬಸರಿಮದರ್(30) ಹಾಗೂ ಪ್ರಕಾಶ ಬಸರಿಮದರ್ (20) ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಚಕ್ಕಡಿ ಸರಿಯಾಗಿ ಓಡಿಸಲಿಲ್ಲ ಎಂದು ತನ್ನ ಸಹೋದರನಿಗೆ ಬೈದಿದ್ದ ಪ್ರಕಾಶ. ಪ್ರಕಾಶ ತನ್ನ ಸಹೋದರನಿಗೆ ಬೈಯುತ್ತಿದ್ದಂತೆ ನಮಗ್ಯಾಕೆ ಬೈದೆ ಎಂದು ತಗಾದೆ ತೆಗೆದ ಕೆಲ ಪುಂಡರು. ಮೂವರು ಅನಾಮಧ್ಯೇಯರಿಂದ ಗೋಪಾಲ್ ಮತ್ತು ಪ್ರಕಾಶ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತಲೆ ಹಾಗೂ ಕೈ ಭಾಗಕ್ಕೆ ಗಂಭೀರ ಗಾಯ. ಗಂಭೀರವಾಗಿ ಗಾಯಗೊಂಡ ಇಬ್ಬರೂ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
