
ಬೆಳಗಾವಿ
ಶಿವಾಜಿ ಮಹಾರಾಜರ ಸಾಹಸ ಕಥೆಗಳನ್ನು ಹೇಳುವ ದೃಶ್ಯಾವಳಿಗಳು, ಡೋಲುಗಳ ಅಬ್ಬರ, ವಿವಿಧ ಕಲಾ ತಂಡಗಳ ಆಕರ್ಷಕ ನೃತ್ಯಗಳು ಬೆಳಗಾವಿ ನಗರದಲ್ಲಿ ಶಿವಾಜಿ ಜಯಂತಿ ಅಂಗವಾಗಿ ಗುರುವಾರ ಆಯೋಜಿಸಿದ್ದ ಮೆರವಣಿಗೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ವೀರತ್ವದ ವೈಭವವೇ ಮರುಕಳಿಸಿತ್ತು.
ನಗರದ ನರಗುಂದ ಭಾವಿ ಚೌಕ್ ಬಳಿ ಶಿವಾಜಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್, ಮೇಯರ್ ಮಂಗೇಶ್ ಪವಾರ್, ಮಾಜಿ ಶಾಸಕ ಸಂಜಯ ಪಾಟೀಲ, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಮಾಜಿ ಶಾಸಕ ಅನಿಲ್ ಬೆನಕೆ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆಗೆ ಚಾಲನೆ ನೀಡಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೆರವಣಿಗೆ ಶುಕ್ರವಾರ ನಸುಕಿನ ಜಾವದ ವರೆಗೂ ನಡೆಯಲಿದೆ.
