
ಬೆಳಗಾವಿ
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆ ನಡೆಸುವ ವೇಳೆ ಅಧಿಕಾರಿಗಳ ಜೊತೆಗೆ ಏರು ಧ್ವನಿಯಲ್ಲಿ ಮಾತನಾಡಿದ ಬಿಜೆಪಿ ಪಾಲಿಕೆ ಸದಸ್ಯ ಸಂದೀಪ್ ಜೀರಗ್ಯಾಗೋಳಗೆ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ತರಾಟೆಗೆ ತೆಗೆದುಕೊಂಡರು.
ಸೋಮವಾರ ಸದಾಶಿವ ನಗರದಲ್ಲಿ ಸಮೀಕ್ಷೆಗೆ ಚಾಲನೆ ಕೊಟ್ಟ ಶಾಸಕ ಆಸೀಫ್ ಸೇಠ್, ಮೇಯರ್, ಡೆಪ್ಯೂಟಿ ಮೇಯರ್, ಡಿಸಿ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ. ಮೊದಲು ಸದಾಶಿವ ನಗರದ ಪಾಲಿಕೆ ಸದಸ್ಯೆ, ಮಾಜಿ ಮೇಯರ್ ಸವಿತಾ ಕಾಂಬಳೆ ಮನೆಯಿಂದ ಆರಂಭಿಸಲು ಪ್ಲಾನ್ ಮಾಡಿದ್ದರು. ಅಲ್ಲಿ ಆಪ್ ಡೌನ್‌ಲೋಡ್ ಆಗದಿದ್ದಕ್ಕೆ ಜನ ಸಾಮಾನ್ಯರ ಮನೆಯಿಂದ ಚಾಲನೆ ನೀಡಲಾಯಿತು. ಆ ಸ್ಥಳಕ್ಕೆ ಬಂದ ಬಿಜೆಪಿ ಪಾಲಿಕೆ ಸದಸ್ಯ ಸಂದೀಪ ಜಿರಗ್ಯಾಗೋಳರಿಂದ ಪಾಲಿಕೆ ಉಪ ಆಯುಕ್ತರ ಜೊತೆಗೆ ವಾಗ್ವಾದ ನಡೆಸಿ ಇಲ್ಲಿ ಶಾಸಕರ ಮಾತು ಕೇಳಿ ರಾಜಕಾರಣ ಮಾಡ್ತಿದ್ದಾರಾ ಎಂದು ಅಧಿಕಾರ ಗೆ ಏರುಧ್ವನಿಯಲ್ಲಿ ಪ್ರಶ್ನೆ ಮಾಡಿದರು. ಆಗ ಮಧ್ಯ ಪ್ರವೇಶಿಸಿದ ಶಾಸಕ ಆಶೀಫ್ ಸೇಠ್ ಅಧಿಕಾರಗಳ ಜೊತೆಗೆ ಏರುಧ್ವನಿಯಲ್ಲಿ ಮಾತನಾಡದಂತೆ ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ತಾಂತ್ರಿಕ ತೊಂದರೆಯಿಂದ ಅಲ್ಲಿ ಆಗಿಲ್ಲ ಅಂತಾ ಸಮಜಾಯಿಷಿ ನೀಡಲು ಅಧಿಕಾರಗಳ ಯತ್ನಿಸಿದರು. ಇದೇ ವೇಳೆ ಕಾಂಗ್ರೆಸ್ ಶಾಸಕ ಸೇಠ್ ಜೊತೆಗೆ ವಾಗ್ಬಾದಕ್ಕೆ ನಿಂತ ಬಿಜೆಪಿ ಪಾಲಿಕೆ ಸದಸ್ಯ ಸಂದೀಪ್ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಅಧಿಕಾರಿಗಳನ್ನ ಅಮಾನತು ಮಾಡುವಂತೆ ಪಾಲಿಕೆ ಸದಸ್ಯ ಆಗ್ರಹಿಸಿದರು. ಪ್ರತಿಯೊಂದಕ್ಕೂ ರಾಜಕಾರಣ, ಸಸ್ಪೆಂಡ್ ಅಂದ್ರೆ ಏನು ಸಮೀಕ್ಷೆ ಚಾಲನೆ ವೇಳೆ ಮೇಯರ್, ಉಪ ಮೇಯರ್ ಎಲ್ಲರೂ ಇದ್ದಾರೆ. ನನ್ನೊಂದಿಗೆ ಏರುಧ್ವನಿಯಲ್ಲಿ ಮಾತನಾಡದಂತೆ ಪಾಲಿಕೆ ಸದಸ್ಯನಿಗೆ ವಾರ್ನ್ ಮಾಡಿದ ಶಾಸಕ ಸೇಠ್ ಬಳಿಕ ಅಲ್ಲಿಂದ ತೆರಳಿದರು.
