Thursday, November 19, 2026
HomeBelagaviಮಸೀದಿಯಲ್ಲಿ ಕುರಾನ್ ಪುಸ್ತಕ ಸುಟ್ಟ ಪ್ರಕರಣ: ಡಿಸಿ ಕಚೇರಿಯತ್ತ ಪ್ರತಿಭಟನೆ ರ್ಯಾಲಿ

ಮಸೀದಿಯಲ್ಲಿ ಕುರಾನ್ ಪುಸ್ತಕ ಸುಟ್ಟ ಪ್ರಕರಣ: ಡಿಸಿ ಕಚೇರಿಯತ್ತ ಪ್ರತಿಭಟನೆ ರ್ಯಾಲಿ

ಬೆಳಗಾವಿ
ಮಸೀದಿಯಲ್ಲಿದ್ದ ಕುರಾನ್ ಪುಸ್ತಕ ಕದ್ದೊಯ್ದು ಕಿಡಿಗೇಡಿಗಳನ್ನು ಅವುಗಳನ್ನು ಸುಟ್ಟ ಹಾಕಿದ ಘಟನೆ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದಿದೆ.
ಮಸೀದಿ ಪಕ್ಕದ ಜಮೀನಿನಲ್ಲಿ ಕುರಾನ್ ಪುಸ್ತಕ ಸುಟ್ಟಿದ್ದಾರೆ. ನಿರ್ಮಾಣ ಹಂತದ ಮಸೀದಿಯ ಕೆಳಮಹಡಿಯಲ್ಲಿದ್ದ ಕುರಾನ್ ಪುಸ್ತಕ, ಎರಡು ಹದೀಸ್ ಸುಟ್ಟು ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದೆ.ಸೋಮವಾರ ಬೆಳಗಿ‌ನ ಜಾವ ಪ್ರಾರ್ಥನೆ ಮಾಡಲು ಬಂದಾಗ ಕುರಾನ್, ಹದೀಸ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಪ್ರಾರ್ಥನೆ ಮುಗಿಸಿದ ಬಳಿಕ ಸುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ ವೇಳೆ ಪಕ್ಕದ ಜಮೀನಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕುರಾನ್, ಹದೀಸ್ ಪುಸ್ತಕ ಪತ್ತೆಯಾಗಿವೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಭೇಟಿ ನೀಡಿದರು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಹಿನ್ನೆಲೆ ‌ಪೊಲೀಸ್ ಬಿಗಿ ಭದ್ರತೆ. ಆರೋಪಿಗಳ ಬಂಧನಕ್ಕೆ ಸಮಾದ ಮುಖಂಡರು ಪಟ್ಟು ಹಿಡಿದಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಂತಿ ಬಸ್ತವಾಡ ಗ್ರಾಮದಲ್ಲಿ ಕುರಾನ್ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹಾಗೂ ಡಿಸಿಪಿ ರೋಹನ್ ಜಗದೀಶ್. ನಗರ ಪೊಲೀಸ್ ಆಯುಕ್ತ ಮಾರ್ಟಿನ್‌ ಮುಂದೆಯೇ ಪ್ರತಿಭಟಿಸಿದ ಮುಸ್ಲಿಂ ಯುವಕರು.
ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುತ್ತೆವೆ ಅಗ್ರಹಿಸಿದ್ದಾರೆ.
ಈ ಹಿಂದೆ ಎರಡು ಘಟನೆ‌ ನಡೆದರೂ ಸಹ ಆರೋಪಿ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚನ್ನಮ್ಮ ವೃತ್ತದಿಂದ ಡಿಸಿ ಕಚೇರಿಯವರೆಗೆ ಪ್ರತಿಭಟನೆ ಮಾಡ್ತೇವಿ ಎಂದು ಯುವಕರ ಪಟ್ಟು ಹಿಡಿದಿದ್ದಾರೆ. ಚನ್ನಮ್ಮ ಬಳಿ ಅವಕಾಶ ನೀಡದೇ ವಿಟಿಯು ವಿವಿ ಬಳಿ ಪ್ರತಿಭಟನೆಗೆ ಅವಕಾಶ ಕೊಡುವುದಾಗಿ ಹೇಳಿದ ಪೊಲೀಸರ ಎದುರಲ್ಲೆ ಲಾ ಇಲಾಹಿ ಇಲ್ಲಲ್ಲಾ. ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗ್ತಿರೋ ಯುವಕರು. ವಿಟಿಯು ಬಳಿಯ ಬೆಳಗಾವಿ ಗೋವಾ ರಸ್ತೆ ತಡೆದು ಪ್ರತಿಭಟನೆ ನಡೆಸಿ ಆರೋಪಿಗಳನ್ನ ಕೂಡಲೇ ಬಂಧಿಸುವಂತೆ ಯುವಕರ ಪಟ್ಟು ಹಿಡಿದಿದ್ದಾರೆ.

Total Views 437
RELATED ARTICLES

Most Popular

Recent Comments

KNN City News
Home
E-Paper