Monday, November 23, 2026
HomeBelagaviನೀರಿನ ವಿಚಾರದಲ್ಲಿ ಶೆಟ್ಟರ್ ರಾಜಕೀಯ..!

ನೀರಿನ ವಿಚಾರದಲ್ಲಿ ಶೆಟ್ಟರ್ ರಾಜಕೀಯ..!

ಬೆಳಗಾವಿ
ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶದಿಂದ ಧಾರವಾಡಕ್ಕೆ ನೀರಿನ ಪೈಪ್ ಲೈನ್ ಕಾಮಗಾರಿಯಲ್ಲಿ‌ ವಿರೋಧ ಇದೆ ಎಂದು ರಾಜಕೀಯ ಮಾಡುವ ಸಂಸದ ಜಗದೀಶ್ ಶೆಟ್ಟರ್ ಅವರು ಮಹದಾಯಿ ಉಳಿಸಲು ಹೋರಾಟ ನಡೆಸುವ ಪರಿಸರ ಪ್ರೇಮಿಗಳಿಗೆ ಪ್ರಾಯೋಜಕತ್ವದ ಹೋರಾಟಗಾರರು ಎಂದಿರುವುದಕ್ಕೆ ಬೆಳಗಾವಿ ಜನರು ಶೆಟ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ‌ ನೀರಿನ ಪೈಪ್ ಲೈನ್ ಕಾಮಗಾರಿಗೆ ನನ್ನ ವಿರೋಧ ಇದೆ ಎಂದು ಹೇಳು ಜಗದೀಶ್ ಶೆಟ್ಟರ್ ಅವರಿಗೆ ಕಳಕಳಿ ಇದ್ದರೇ ಜಿಲ್ಲಾ ಉಸ್ತುವಾರಿ ಸಚಿವ, ಡಿಸಿಎಂ ಭೇಟಿಯಾಗಿ ಸಮಸ್ಯೆ ಬಗೆ ಹರಿಸುವ ಬದಲು ಶೆಟ್ಟರ್ ರಾಜಕೀಯ ಮಾಡುವುದನ್ನು ಬಿಡಬೇಕು ಎನ್ನುವುದು ಜನರ ಒತ್ತಾಯವಾಗಿದೆ.
ಹಿಡಕಲ್ ‌ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಕೊಂಡೊಯ್ಯಲು ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ನದಿಯಿಂದಲೂ ಪೈಪ್ ಲೈನ್ ಕಾಮಗಾರಿ ಮಾಡಿಕೊಂಡು ನೀರು ಸರಬರಾಜು ಮಾಡುತ್ತಿದ್ದಾರೆ.
ನವಿಲು‌ತೀರ್ಥ ಜಲಾಶಯದಿಂದ ಧಾರವಾಡಕ್ಕೆ ನೀರಿನ ಸಮಸ್ಯೆಯಾಗದಂತೆ ಕಳೆದ 2021-22ರಲ್ಲಿ ಹೊಸ ಯೋಜನೆಯಿಂದ ಹುಬ್ಬಳ್ಳಿ-ಧಾರವಾಡ, ಕುಂದಗೋಳ ತಾಲೂಕಿನಲ್ಲಿ ಬರುವ ಹಳ್ಳಿಗಳು ಹಾಗೂ ಹುಬ್ಬಳ್ಳಿ- ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ 279 ಎಂಎಲ್ ಡಿ ಎಂದರೆ ವರ್ಷಕ್ಕೆ 4 ಟಿಎಂಸಿ ನೀರು ತೆಗೆದುಕೊಂಡು ಹೋಗಲು ಯೋಜನೆ ಮಾಡಿದ್ದಾರೆ. 2041ರವರೆಗೆ ಧಾರವಾಡ ಜಿಲ್ಲೆಗೆ ನೂರು ಪ್ರತಿಶತ ‌ನೀರು ಪೂರೈಕೆ ಮಾಡುತ್ತಿದೆ.
ಇಷ್ಟೆಲ್ಲ ಬೆಳವಣಿಗೆ ಇದ್ದರೂ ಬೆಳಗಾವಿ ಜಿಲ್ಲೆಯ ಪರಿಸರವಾದಿಗಳು, ಪರಿಸರ ಪ್ರೇಮಿಗಳು ಕಳಸಾ ಬಂಡೂರಿ, ಮಹದಾಯಿ ಯೋಜನೆಯ ಅನುಷ್ಠಾನದಿಂದ ಬಹಳಷ್ಟು ಅರಣ್ಯ ಪ್ರದೇಶ ಹಾಳಾದರೆ ಖಾನಾಪುರ, ಬೈಲಹೊಂಗಲ, ಬೆಳಗಾವಿ ಎಲ್ಲ ಪ್ರದೇಶದಲ್ಲಿ ಮಳೆ ಕಡಿಮೆಯಾಗುತ್ತದೆ. ಈಗಾಗಲೇ ಜನರಿಗೆ ಕುಡಿಯುವ ನೀರಿನ ಮತ್ತು ನೀರಾವರಿಗೆ ಹಾಗೂ ಬೆಳಗಾವಿ ಕೈಗಾರಿಕಾ ಪ್ರದೇಶಕ್ಕೆ‌ ನೀರಿನ ಸಮಸ್ಯೆ ಇದೆ. ಈ‌ ಎಲ್ಲ ವಿಷಯದ ಬಗ್ಗೆ ಜಗದೀಶ್ ಶೆಟ್ಟರ್ ಪರಿಸರ ಪ್ರೇಮಿಗಳಿಗೆ ಬೆಂಬಲ ಕೊಡುತ್ತೇವೆ ಎಂದು ನಿನ್ನೆ ಜಗದೀಶ್ ಶೆಟ್ಟರ್ ಅವರು ಪರಿಸರ ಪ್ರೇಮಿಗಳ ಮೇಲೆ ಗೋವಾ ಪ್ರಾಯೋಜಕತ್ವದ ಹೋರಾಟಗಾರಿಗೆ ಅವಹೇಳನ ಮಾಡಿದ್ದಾರೆ.
ಈ ಹೋರಾಟದಲ್ಲಿ ಹಿರಿಯ ಹೋರಾಟಗಾರರು ದಿಲೀಪ್ ಕಾಮತ, ಪ್ರಶಾಂತ ಕಾಮತ, ಲಿಂಗರಾಜ ಜಗಜಂಪಿ, ನೈಲಾ ಕೋಲಾ, ಕರ್ನಲ್‌ ಸೈನಿ, ಅಮೃತ ಚರಂತಿಮಠ ಇವರು ಕಳೆದ 40 ವರ್ಷದಿಂದ ಮಹದಾಯಿ ಬಗ್ಗೆ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಭೀಮಘಡ ಅರಣ್ಯ‌ ಪ್ರದೇಶ ಉಳಿವಿಗಾಗಿ ಸರಕಾರದ ಸಹಾಯವಿಲ್ಲದೆ ಹೋರಾಟ ಮಾಡಿಕೊಂಡು ಬಂದಿರುವ ಪರಿಸರ ಪ್ರೇಮಿಗಳಿಗೆ ಗೋವಾ ಪ್ರಾಯೋಜಿಕತ್ವದ ಹೋರಾಟ ಎಂದು ಅವಮಾನಕರ ಹೇಳಿಕೆ ನೀಡಿದ್ದಕ್ಕೆ ಪರಿಸರ ಪ್ರೇಮಿಗಳು ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಇದನ್ನು ಖಚಿತ ಪಡಿಸಲಿ ಎನ್ನುವ ಸವಾಲ್ ಅನ್ನು ಪರಿಸರ ಪ್ರೇಮಿಗಳು ಹಾಕಿದ್ದಾರೆ. ಕಲಾವಿದರ ಹಾಗೆ ಇವರು ನಮ್ಮ ಸಂಸ್ಕೃತಿಕ ರಾಯಬಾರಿಗಳು. ಜಗದೀಶ್ ಶೆಟ್ಟರ್ ಅವರು ಅವಮಾನ ಮಾಡಿದ್ದು ಬೆಳಗಾವಿ ಜನರಿಗೆ ನೋವಾಗಿದೆ.
ಎಲ್ಲಿ ಬೆಂಬಲ ಕೊಡುತ್ತೇವೆ ಎಂದು ಅಲ್ಲಿ ರಾಜಕೀಯ ಮಾಡಿದರು. ಪರಿಸರ ಪ್ರೇಮಿಗಳಿಗೆ ಬೆಂಬಲ ಕೊಡುತ್ತೇನೆ ಎಂದು ಗೋವಾ ಪ್ರಾಯೋಜಕತ್ವದ ಹೋರಾಟ ಎಂದು ಪರಿಸರ ಪ್ರೇಮಿಗಳಿಗೆ ಅವಮಾನ ಮಾಡಿದ್ದು, ಶೆಟ್ಟರ್ ದ್ವಂದ್ವ ‌ನಿಲುವು ಬಿಡಬೇಕು ಎನ್ನುವುದು ಬೆಳಗಾವಿ ಜನರ ಒತ್ತಾಯವಾಗಿದೆ.

 

Total Views 279
RELATED ARTICLES

Most Popular

Recent Comments

KNN City News
Home
E-Paper