
ಬೆಳಗಾವಿ
ಬಸ್ಸಿನ ಕಿಟಕಿಯ ಸಲುವಾಗಿ ಕಾಲೇಜು ವಿದ್ಯಾರ್ಥಿ ಮಾಂಜ್ ಅಬ್ದುಲ್ ಸನದಿಗೆ ಅವಾಚ್ಯ ಶಬ್ಧಗಳಿಂದ ನಿಂಧಿಸಿ, ಬೇದರಿಕೆ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಗುಲಾಬ್ ಬೊರಸೆ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಂಧಿಯ ಕಾನೂನು ಸಂಘರ್ಷಕ್ಕೆ ಒಳಗಾದ ಆರೋಪಿಗಳಿಗೆ ಕಾನೂನಾತ್ಮಕವಾಗಿ ತನಿಖೆ ಮಾಡಿ ಇಬ್ಬರು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲು ಪ್ರಯತ್ನಿಸುತ್ತೇವೆ. ಚಿಕ್ಕ ವಯಸ್ಸಿನಲ್ಲಿಯೇ ಮಾರಕಾಸ್ತçಗಳನ್ನು ಹಿಡಿದು ಕಾನೂನು ಭಯವಿಲ್ಲದೆ ಸಾರ್ವಜನಿಕವಾಗಿ ತಿರುಗಾಡುವುದು ಅಪರಾಧ ಎಂದರು.
ಇಂಥ ಘಟನೆಗಳು ಮುಂದೆ ನಡೆಯದಂತೆ ನಗರ ಪೊಲೀಸ್ ಇಲಾಖೆಯಿಂದ ನಾಳೆಯಿಂದ ಚುಚ್ಚು ನಿಯಂತ್ರಣ ತಂಡ ರಚನೆ ಮಾಡಲಾಗುವುದು. ಈ ತಂಡದಲ್ಲಿ ಐದಾರು ಸಿಬ್ಬಂದಿಗಳು ವಾಹನದ ಮೇಲೆ ತೆರಳಿ ಸಂಶಯಾಸ್ಪದವಾಗಿ ಕಂಡು ಬಂದ ವ್ಯಕ್ತಿಗಳ ಕಡೆ ಮಾರಕಾಸ್ತçಗಳು ಕಂಡು ಬಂದರೆ ಅವರ ಮೇಲೆ ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಳಗಾವಿ ನಗರದಲ್ಲಿ ಚಾಕು, ತಲ್ವಾರ ತೆಗೆದುಕೊಂಡು ತಿರುಗಾಡುವವರ ಮೇಲೆ ರೌಡಿ ಶೀಟರ್ ಓಪನ್ ಮಾಡಿ ಪ್ರತಿ ಹಬ್ಬ ಹರಿದಿಗಳಲ್ಲಿ ಪೊಲೀಸ್ ಠಾಣೆಗೆ ಬಂದು ಹಾಜರಾಗಬೇಕು ಎಂದು ಖಡಕ ಎಚ್ಚರಿಕೆ ನೀಡಿದರು.
ಚಾಕು ಇರಿತ ಪ್ರಕರಣದಲ್ಲಿ ಆರೋಪಿಗಳ ಪತ್ತೇ ಕಾರ್ಯಾಚರಣೆ ನಡೆಸಿದ ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಸಿಪಿಐಗಳಾದ ಮಂಜುನಾಥ ನಾಯಕ, ಮಹಾಂತೇಶ ದಾಮಣ್ಣವರ, ಬಿ.ಆರ್.ಗಡ್ಡೇಕರ್, ಪಿಎಸ್ಐ ವಿಠ್ಠಲ್ ಹಾವಣ್ಣವರ, ಕಿರಣ ಹಣಕಟ್ಟಿ ತಂಡ ರಚನೆ ಮಾಡಿ ಕಾನೂನು ಸಂಘರ್ಷಕ್ಕೆ ಒಳಗಾದ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಹಿರೇಬಾಗೇವಾಡಿ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 310 ಗ್ರಾಂ ಬೆಳ್ಳಿ ಆಭರಣ, ಎರಡೂ ಬೈಕ್, ಕಬ್ಬಿಣದ ರಾಡ್ ಸೇರಿದಂತೆ 14.95 ಲಕ್ಷ ರೂ. ಮೌಲ್ಯದ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ ಎಂದರು.
