
ಬೆಳಗಾವಿ
11ನೇ ಅಂತಾರಾಷ್ಟ್ರೀಯ ಯೋಗಾ ದಿನಾಚರಣೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಯೋಗಾ ಗುರು ರಾಮದೇವಬಾಬಾ ವೇಷ ಧರಿಸಿ ಬಂದಿದ್ದ ಪುಟಾಣಿ ಮಗು ಯೋಗ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆಯಿತು. ಶನಿವಾರ ಜಿಲ್ಲಾಡಳಿತ, ಜಿಪಂ, ಆಯುಷ್ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಯೋಗಾ ದಿನಾಚರಣೆಯಲ್ಲಿ ವೀರ ರಾಣಿ ಕಿತ್ತೂರು ಚನ್ನಮ್ಮ ವೇಷ ಧರಿಸಿದ ಪುಟಾಣಿಯ ಯೋಗವು ಗಮನ ಸೆಳೆಯಿತು.
ಪಾಲಿಕೆಯಿಂದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಸಿಗೆ ನೀರು ಹಾಕುವ ಮೂಲಕ ಸಂಸದ ಜಗದೀಶ್ ಶೆಟ್ಟರ್ ಚಾಲನೆ ನೀಡಿದರು.
ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬ್ ಬೊರಸೆ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಸೌಮ್ಯಾ ಬಾಪಟ ಉಪಸ್ಥಿತರಿದ್ದರು. ಶಾಲಾ, ಕಾಲೇಜ ವಿದ್ಯಾರ್ಥಿಗಳು ಯೋಗಾ ದಿನಾಚರಣೆಯಲ್ಲಿ ಭಾಗಿಯಾಗಿ ವಿವಿಧ ರೀತಿಯ ಯೋಗಾಸನ ಮಾಡಿ ನೋಡಗರ ಗಮನ ಸೆಳೆದರು.
