Monday, November 23, 2026
HomeBelagaviಕರಡಿ ಭೀಕರ ದಾಳಿ, ವ್ಯಕ್ತಿ ಗಂಭೀರ ಗಾಯ

ಕರಡಿ ಭೀಕರ ದಾಳಿ, ವ್ಯಕ್ತಿ ಗಂಭೀರ ಗಾಯ

 

ಬೆಳಗಾವಿ
ಕಣಕುಂಬಿ ಚೆಕ್ ಪೋಸ್ಟ್ ಬಳಿ ವ್ಯಕ್ತಿಯೊಬ್ಬರ ಮೇಲೆ ಕರಡಿ ಭೀಕರ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ.
ಸ್ಥಳೀಯ ದಶರಥ ವರಂಡಿಕರ(60) ಎಂಬುವವರು ಇಂದು ಬುಧವಾರ ಬೆಳಂಬೆಳಿಗ್ಗೆ ದನ ಮೇಯಿಸಲು ಅಡವಿಗೆ ಹೊದಾಗ ಕರಡಿ ದಾಳಿ ನಡೆಸಿದೆ. ದನಗಳನ್ನು ಅರಣ್ಯದಂಚಿನಲ್ಲಿ ಮೇಯಲು ಬಿಟ್ಟು ವಾಪಸ್ ಬರುತ್ತಿದ್ದಾಗ ಕರಡಿ ದಾಳಿ ನಡೆಸಿದೆ. ಕರಡಿ ದಾಳಿಯಿಂದ ವ್ಯಕ್ತಿಯ ಮುಖ ಹರಿದು ಹೋಗಿದೆ. ಗಾಯಾಳುವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಖಾನಾಪುರ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Total Views 142
RELATED ARTICLES

Most Popular

Recent Comments

KNN City News
Home
E-Paper