Monday, November 23, 2026
HomeBelagaviಬಿಡಿಸಿಸಿ ಬ್ಯಾಂಕ ಚುನಾವಣೆ ಸರಕಾರಕ್ಕೆ ಕಂಟಕ...!

ಬಿಡಿಸಿಸಿ ಬ್ಯಾಂಕ ಚುನಾವಣೆ ಸರಕಾರಕ್ಕೆ ಕಂಟಕ…!

ಬೆಳಗಾವಿ
ರಾಜ್ಯ‌ ರಾಜಕಾರಣದಲ್ಲಿ ತನ್ನದೇ ಛಾಪು ಉಳಿಸಿಕೊಂಡಿರುವ ಗಡಿಜಿಲ್ಲೆ ಬೆಳಗಾವಿ ಡಿಸಿಸಿ ಬ್ಹಾಂಕ ಚುನಾವಣೆ ಸರಕಾರಕ್ಕೆ ಮುಳುವಾಗುವ ಸಾಧ್ಯತೆ ದಟ್ಟವಾಗಲಾರಂಭಿಸಿವೆ.
ಹಣಬಲ, ಜನಬಲ, ತೋಳ್ಬಲ ರಾಜಕಾರಣದಲ್ಲಿ ಜಿಲ್ಲೆಯ ರಾಜಕೀಯ ಮುಖಂಡರು ತಮ್ಮದೇ ಛಾಪು ಮೂಡಿಸುತ್ತ ಬಂದಿದ್ದು, ಸಹಕಾರ ಸಂಘಗಳ‌ ಮೇಲೆ ಹಿಡಿತ ಸಾಧಿಸುವ ಮೂಲಕ ಅಡಳಿತದ ಮೇಲೆ ಪ್ರಭಾವ ಬೀರುವ ಉದ್ದೇಶ ಎಲ್ಲರದ್ದಾಗಿದೆ.
ಕೋರೆ, ಕತ್ತಿ, ಜಾರಕಿಹೊಳಿ, ಸವದಿ, ಜೊಲ್ಲೆ, ಹೆಬ್ಬಾಳ್ಕರ ಅಂತಹ ಪ್ರಭಾವಿ ಕುಟುಂಬಗಳ ನಡುವೆ ರಾಜಕೀಯೆತರವಾಗಿ ಶತ್ರುತ್ವ-ಮಿತ್ರತ್ವ ಕಲ್ಪಿಸುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಹೀಗಾಗಿ ಯಾರ ನಡುವೆ ಮಿತ್ರತ್ವ ಏರ್ಪಟ್ಟರೂ ಸರಕಾರಕ್ಕೆ ತುಸು ತೊಂದರೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.
ಈಗಾಗಲೇ ಜಾರಕಿಹೊಳಿ ಟಿಂನಲ್ಲಿ ಗುರುತಿಸಿಕೊಂಡಿರುವ ಬಹುಪಾಲು ನಾಯಕರು ಚುನಾವಣೆ ತಯಾರಿ ನಡೆಸುವ ಮೂಲಕ ಈಗಿನಿಂದಲೇ ಸಭೆಗಳಲ್ಲಿ ಗಿಪ್ಟಕಾರ್ಡ ನೀಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
ಮೇಲ್ನೋಟಕ್ಕೆ ಯಾವುದೇ ತಯಾರಿ ನಡೆಸದೇ ಇರುವ ವಿರೋಧಿ ಬಣ ತನ್ನ ವೋಟ ಬ್ಯಾಂಕ ಭದ್ರ ಪಡಿಸಿಕೊಂಡಿದ್ದು, ಬೆಳಗಾವಿ, ಖಾನಾಪೂರ, ಯರಗಟ್ಟಿ, ಸವದತ್ತಿ, ರಾಮದುರ್ಗ, ನಿಪ್ಪಾಣಿ ಕ್ಷೇತ್ರದಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತವೆಂಬ ವಾತಾವರಣವಿದೆ.
ಈಗಾಗಲೇ ಗೋಕಾಕ ಹಾಗೂ ಮೂಡಲಗಿಯಲ್ಲಿ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿ, ಹುಕ್ಕೇರಿ ಹಾಗೂ ಚಿಕ್ಕೋಡಿ ಕತ್ತಿ, ಕೋರೆ, ಹುಕ್ಕೇರಿ ಬೆಂಬಲಿತ ಅಭ್ಯರ್ಥಿ, ಅಥಣಿ ಹಾಗೂ ಕಾಗವಾಡದಲ್ಲಿ ಸವದಿ, ಕಾಗೆ ಬೆಂಬಲಿತರಿಗೆ, ಬೈಲಹೊಂಗಲ ಹಾಗೂ ಕಿತ್ತೂರ ದೊಡಗೌಡರ, ಕೌಜಲಗಿ ಬೆಂಬಲಿತರಿಗೆ ದೊರೆಯುವ ಸಾಧ್ಯತೆಗಳಿವೆ.
ಇನ್ನೂ ಬೆಳಗಾವಿಯಿಂದ ರಾಹುಲ ಜಾರಕಿಹೊಳಿ ಕಣಕ್ಕಿಳಿದರೆ ಮೃಣಾಲ್ ಹೆಬ್ಬಾಳ್ಕರ ಪ್ರತಿಸ್ಪರ್ಧಿಯಾಗಲಿದ್ದಾರೆ. ಖಾನಾಪೂರದಿಂದ ಅರವಿಂದ ಪಾಟೀಲ ವಿರುದ್ಧ ಅಂಜಲಿ ನಿಂಬಾಳ್ಕರ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ ಈ ಎರಡು ಕ್ಷೇತ್ರಗಳಲ್ಲಿ ಚುನಾವಣೆ ಏರ್ಪಟ್ಟಲ್ಲಿ ಹೈಅಲರ್ಟ ಕ್ಷೇತ್ರಗಳಾಗಿ ಗುರುತಿಸಿಕೊಳ್ಳಲಿವೆ.
ಕಳೆದ‌ ಚುನಾವಣೆಯಲ್ಲಿ‌ ದಿ.ಉಮೇಶ ಕತ್ತಿ ಡಾ.ಪ್ರಭಾಕರ ಕೋರೆ, ಲಕ್ಷ್ಮಣ ಸವದಿ,‌ ಬಾಲಚಂದ್ರ‌ ಜಾರಕಿಹೊಳಿ ನೇತೃತ್ವದಲ್ಲಿ ಅವಿರೋಧ ಪ್ರಕ್ರಿಯೆ ನಡೆದಿತ್ತು. ಆದರೆ ಈ ಬಾರಿ‌‌‌ ಚುನಾವಣೆ ನಡೆಯುವ ಸಾಧ್ಯತೆ‌ ದಟ್ಟವಾಗಲಾರಂಭಿಸಿವೆ.

ಈಗಾಗಲೇ ಎಚ್ಚೆತ್ತುಕೊಂಡಿರುವ ಸರಕಾರ ಈ ಕಂಠಕದಿಂದ ಪಾರಾಗಲು ಜಿಲ್ಲಾ ವಿಭಜಿಸುವ ದಾಳ ಉರುಳಿಸಿ ಸುಮ್ಮನಾಗಿದೆ. ಒಂದು ಜಿಲ್ಲಾ ವಿಭಜನೆಯಾದಲ್ಲಿ ಸರಕಾರ‌ ಸೇಫ ಇಲ್ಲದಿದ್ದರೆ ಕಂಟಕ ಫಿಕ್ಸ.

 

Total Views 138
RELATED ARTICLES

Most Popular

Recent Comments

KNN City News
Home
E-Paper