Monday, November 23, 2026
HomeBelagaviಆಟೋದಲ್ಲಿಯೇ ಆತ್ಮಹತ್ಯೆ ‌ಮಾಡಿಕೊಂಡ ಪ್ರೇಮಿಗಳು

ಆಟೋದಲ್ಲಿಯೇ ಆತ್ಮಹತ್ಯೆ ‌ಮಾಡಿಕೊಂಡ ಪ್ರೇಮಿಗಳು

ಬೆಳಗಾವಿ
ಆಟೋದಲ್ಲಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮುನವಳ್ಳಿ ಪಟ್ಟಣದ ರಾಘವೇಂದ್ರ ಜಾಧವ್(28), ರಂಜೀತಾ ಚೋಬರಿ(26) ಆತ್ಮಹತ್ಯೆ ಮಾಡಿಕೊಂಡವರು‌. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿರುವ ಇವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ರಾಘವೇಂದ್ರ, ರಂಜೀತಾ. ಹದಿನೈದು ದಿನದ ಹಿಂದೆ ರಂಜೀತಾ ನಿಶ್ಚಿತಾರ್ಥವಾಗಿತ್ತು. ಮನೆಯಲ್ಲಿ ಮದುವೆ ಒಪ್ಪದೇ ಬೇರೊಬ್ಬ ಯುವಕನೊಟ್ಟಿಗೆ ಮದುವೆ ನಿಶ್ಚಿಯ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಬೆಳಗ್ಗೆ ಇಬ್ಬರು ಒಂದೇ ಆಟೋದಲ್ಲಿ ಬಂದಿದ್ದರು.ನಿರ್ಜನ ಪ್ರದೇಶದಲ್ಲಿ ಬಂದು ಆಟೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

Total Views 2041
RELATED ARTICLES

Most Popular

Recent Comments

KNN City News
Home
E-Paper