Monday, November 23, 2026
HomeBelagaviಸರಣಿ‌ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಸರಣಿ‌ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಬೆಳಗಾವಿ
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸರಣಿ ಅಪಘಾತದಲ್ಲಿ ಇಬ್ಬರ ದಾರುಣವಾಗಿ ಮೃತಪಟ್ಟ ‌ಘಟನೆ ಭಾನುವಾರ ನಡೆದಿದೆ.
ಬೈಕ್ ನಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ಹರಿದ ಲಾರಿಯ ಅಪಘಾತದ ಭೀಕರತೆಗೆ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಎರಡು ಲಾರಿ, ಕಾರು, ಎರಡು ಬೈಕ್ ಗಳ ಮಧ್ಯೆ ನಡೆದ ರಸ್ತೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಹುಬ್ಬಳ್ಳಿ ನಿವಾಸಿ ಶಿವಪ್ಪ ಶಹಾಪುರ, ನಂದಗಡ ನಿವಾಸಿ ರಫೀಕ್ ಜಾಂಬೋಟಿ ಮೃತಪಟ್ಟಿದ್ದಾರೆ. ಇಬ್ಬರಿಗೆ ಗಂಭೀರ ಗಾಯ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಿರೇಬಾಗೆವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Total Views 167
RELATED ARTICLES

Most Popular

Recent Comments

KNN City News
Home
E-Paper