Monday, November 23, 2026
HomeBelagaviಗೋವಾದಲ್ಲಿ ಕನ್ನಡ ಕಾರ್ಮಿಕರ ಮೇಲೆ ಗೂಂಡಾಗಿರಿ

ಗೋವಾದಲ್ಲಿ ಕನ್ನಡ ಕಾರ್ಮಿಕರ ಮೇಲೆ ಗೂಂಡಾಗಿರಿ

ಬೆಳಗಾವಿ
ನೆರೆಯ ಗೋವಾ ರಾಜ್ದಲ್ಲಿ ಕನ್ನಡಿಗ ಕಾರ್ಮಿಕರ ಮೇಲೆ ಗೂಂಡಾಗಿರಿ, ದಬ್ಬಾಳಿಕೆ ಜೋರಾಗಿದ್ದು, ಕರ್ನಾಟಕದವರು, ಕನ್ನಡಿಗರನ್ನ ಟಾರ್ಗೆಟ್ ಮಾಡಿ ಹಲ್ಲೆ ಆರೋಪ ಕೇಳಿ ಬಂದಿದೆ.
ಬುಧವಾರ ಸಂಜೆ ಕರ್ನಾಟಕದ ವಿಜಯಪುರ ಜಿಲ್ಲೆ ಕಲಕೇರಿ ಗ್ರಾಮದ ನಿವಾಸಿ ಅನಿಲ್ ರಾಠೋಡ ಮೇಲೆ ಕೆಲ ಗೂಡಾಗಳು ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಗೋವಾದಲ್ಲಿ ಸುರಕ್ಷಿತ ಇಲ್ಲ. ಸಿಎಂ ಸಿದ್ದರಾಮಯ್ಯ ಅವರಿಂದ ರಕ್ಷಣೆಗೆ ಕನ್ನಡಿಗರು ಮನವಿ ಮಾಡಿದ್ದಾರೆ.
ಗೋವಾ ರಾಜ್ಯದ ಪ್ರೆಡ್ನೆ ಹತ್ತಿರದ ರಸ್ತೆಯಲ್ಲಿ ಟ್ರಕ್ ಅಡ್ಡಗಟ್ಟಿ ಗೂಂಡಾಗಿರಿ ಮಾಡಿದ್ದಾರೆ‌. ಓಮಿನ್ ಕಾರ್, ಜೀಪ್ ನಲ್ಲಿ ಬಂದು ಅಡ್ಡಗಟ್ಟಿ ಆರೋಪಿಗಳಿಂದ ದಬ್ಬಾಳಿಕೆ ಮಾಡಿ ಕನ್ನಡಿಗ ಡ್ರೈವರ್ ಅನಿಲ್ ಗೆ ಥಳಿತ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.
ಹಲ್ಲೆ ಮಾಡೋ ವಿಡಿಯೋ ಮೊಬೈಲ್ ನಲ್ಲಿ ಚಿತ್ರೀಕರಿಸಿದ ಡ್ರೈವರ್ ಅನಿಲ್. ಮಹಾರಾಷ್ಟ್ರದಿಂದ ಗೋವಾಗೆ ಕಟ್ಟಡಕ್ಕೆ ‌ಕಲ್ಲು ತೆಗೆದುಕೊಂಡು ಹೋಗುತ್ತಿದ್ದಾಗ ಅಟ್ಯಾಕ್ ಮಾಡಿದ್ದಾರೆ.
ಬದುಕು ಕಟ್ಟಿಕೊಳ್ಳಲು ಗೋವಾದಲ್ಲಿ ನೆಲೆಸಿರೋ ಡ್ರೈವರ್ ಅನಿಲ್. ಸತತ ಆರು ತಿಂಗಳಿನಿಂದ ಕನ್ನಡಿಗರನ್ನ ಮೇಲೆ ಅಟ್ಯಾಕ್ ಮಾಡುತ್ತಿರು ಆರೋಪ ಮಾಡಿದ್ದಾರೆ.
ಪೆಡ್ನೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಲ್ಲೆಗೊಳಗಾದ ಅನಿಲ್ ದೂರು ಕೊಟ್ಟರು ಗೂಂಡಾಗಳ ವಿರುದ್ಧ ಕ್ರಮ ಜರುಗಿಸದ ಗೋವಾ ಪೊಲೀಸರು ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋವಾ ರಾಜ್ಯದ ಮಾಪ್ಸಾ ಟ್ರಕ್ ಮಾಲೀಕರ ಸಂಘದ ಮುಖಂಡರಾದ ಸಮೀರ್ ಶೆಟ್ಟರ್, ಸುರೇಶ್ ಪಟ್ಟಿಗೇರಿಯಿಂದ ಘಟನೆ ಖಂಡಿಸಿದ್ದಾರೆ.
ಗೋವಾದಲ್ಲಿ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಗೋವಾದಲ್ಲಿ ಕನ್ನಡಿಗರ ಮೇಲಿನ ಗೂಂಡಾಗಿರಿ ಮಟ್ಟಹಾಕಲು ಸಿಎಂ ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಿ ಹಲ್ಲೆಯಾಗದಂತೆ ಗೋವಾ ಸಿಎಂಗೆ ಮಾತಾಡಲು ಮನವಿ ಮಾಡಿದ್ದಾರೆ.

Total Views 201
RELATED ARTICLES

Most Popular

Recent Comments

KNN City News
Home
E-Paper