Thursday, November 19, 2026
HomeBelagaviಮೇಯರ್ ಆಸ್ತಿ ವಿವರದಲ್ಲಿ ಲೋಪದೋಷ: ನೋಟಿಸ್ ಜಾರಿ ಮಾಡಿದ ಆರ್ ಸಿ

ಮೇಯರ್ ಆಸ್ತಿ ವಿವರದಲ್ಲಿ ಲೋಪದೋಷ: ನೋಟಿಸ್ ಜಾರಿ ಮಾಡಿದ ಆರ್ ಸಿ

ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮಂಗೇಶ್ ಪವಾರ್ ಹಾಗೂ ಬಿಜೆಪಿ ಸದಸ್ಯ ಜಯಂತ ಜಾಧವ ಅವರು ಸಲ್ಲಿಸಿದ ಆಸ್ತಿ ವಿವರದಲ್ಲಿ ಲೋಪದೋಷ ಇರುವುದರಿಂದ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ 15 ದಿನದಲ್ಲಿ ಉತ್ತರ ನೀಡಬೇಕೆಂದು ಕಾರಣ ಕೇಳಿ ಮಂಗಳವಾರ ನೋಟಿಸ್ ಜಾರಿ ಮಾಡಿದ್ದಾರೆ.
ರಾಜಕುಮಾರ ಟೋಪಣ್ಣವರ ಈ ಹಿಂದೆ ಪ್ರಾದೇಶಿಕ ಆಯುಕ್ತರಿಗೆ ಮೇಯರ್ ಮಂಗೇಶ್ ಪವಾರ್ ಹಾಗೂ ಜಯಂತ ಜಾಧವ ಅವರು ಆಸ್ತಿ ಅಫಿಡೇವಿಟ್ ನಲ್ಲಿ ಲೋಪದೋಷ ಇದೆ ಎಂದು ದೂರು ಸಲ್ಲಿಸಿದರು ಕ್ರಮ ಕೈಗೊಂಡಿರಲಿಲ್ಲ. ಈಗ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಮಂಗೇಶ್ ಪವಾರ್ ಹಾಗೂ ಜಯಂತ ಜಾಧವ ಸಲ್ಲಿಸಿದ ಆಸ್ತಿಯಲ್ಲಿ ಲೋಪ ಇದೆ. 15 ದಿನದಲ್ಲಿ ನೋಟಿಸ್ ಗೆ ಉತ್ತರಿಸದಿದ್ದಲ್ಲಿ ನಿಮ್ಮ ಸದಸ್ಯತ್ವವನ್ನು ಅನರ್ಹ ಮಾಡುವುದಾಗಿ ನೋಟಿಸ್ ನಲ್ಲಿ ತಿಳಿಸಿದ್ದಾರೆ.

Total Views 77
RELATED ARTICLES

Most Popular

Recent Comments

KNN City News
Home
E-Paper