Thursday, November 19, 2026
HomeBelagaviಮೇಲ್ಸೇತುವೆ ನಿರ್ಮಾಣಕ್ಕೆ ‌ಕೂಡಿ ಬಂದ ಕಾಲ

ಮೇಲ್ಸೇತುವೆ ನಿರ್ಮಾಣಕ್ಕೆ ‌ಕೂಡಿ ಬಂದ ಕಾಲ

ಬೆಳಗಾವಿ
ಎರಡು ದಶಕಗಳಿಂದ ಕನಸಾಗಿಯೇ ಉಳಿದಿದ್ದ ನಗರದ ಮೇಲೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿಪೂಜೆ ನೆರವೇರಿಸಲಿದ್ದಾರೆ.
ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ 250 ಕೋಟಿ ರೂ. ವೆಚ್ಚದಲ್ಲಿ 6.8 ಕಿಮೀ ಉದ್ದದ ಮೇಲೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಅನುದಾನವೂ ಬಿಡುಗಡೆಯಾಗಿದೆ. ಜಿಲ್ಲಾಡಳಿತ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದೆ.
ರಾಜ್ಯ ಸರ್ಕಾರ 2025-26 ಬಜೆಟ್‌ನಲ್ಲಿ ಸಾಲಿನ ಘೋಷಿಸಿದಂತೆಯೇ ಮೇಲ್ವೇತುವೆ ಯೋಜನೆಗೆ ಲೋಕೋಪಯೋಗಿ ಇಲಾಖೆ ಅನುದಾನ ನೀಡುತ್ತಿದೆ. ಬೆಂಗಳೂರು ಮೆಟ್ರೋ ಮಾದರಿಯಲ್ಲಿ ನಿರ್ಮಿಸುತ್ತಿರುವುದರಿಂದ ಭೂಸ್ವಾಧೀನ ಮಾಡಿಕೊಳ್ಳುತ್ತಿಲ್ಲ. ಯೋಜನೆ ಜಾರಿಗೆ ಮೊದಲ ಹಂತದಲ್ಲಿ 200 ಕೋಟಿ ರೂ. ವೆಚ್ಚ ರಾಜ್ಯ ಸರ್ಕಾರವೇ ಭರಿಸಲಿದೆ.
ಎರಡನೇ ಹಂತದ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಅನುದಾನ ಪಡೆದುಕೊಳ್ಳಲಿದೆ. ಒಟ್ಟಿನಲ್ಲಿ 2027ರ ಅಂತ್ಯದೊಳಗೆ ಮೇಲೇತುವೆ ಕಾಮಗಾರಿ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ಹೊಂದಿದೆ. ನೀಲಿನಕ್ಷೆ ಅಂತಿಮವಾಗಿದ್ದು, ಇದೇ ತಿಂಗಳು ಟೆಂಡರ್ ಕರೆಯಲಾಗುವುದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.

 

Total Views 40
RELATED ARTICLES

Most Popular

Recent Comments

KNN City News
Home
E-Paper