
ಬೆಳಗಾವಿ
ಇಲ್ಲಿನ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಯ ಮಾರ್ಕೆಟ್ ಲೈಸನ್ಸ್ ರದ್ದು ಮಾಡಿ ಸರಕಾರ ಆದೇಶ ಹೊರಡಿಸಿ ಜಿಲ್ಲಾಡಳಿ 48 ಗಂಟೆಯಲ್ಲಿ ಎಪಿಎಂಸಿಗೆ ಸ್ಥಳಾಂತರವಾಗಬೇಕು ಇಲ್ಲಿ ಯಾವುದೇ ವ್ಯಾಪಾರ ನಡೆಸದಂತೆ ಆದೇಶ ಮಾಡಿದರೂ ಖಾಸಗಿ ಮಾರುಕಟ್ಟೆಯಲ್ಲಿ ತರಕಾರಿ ತುಂಬಿದ ವಾಹನಗಳು ಹೋಗುತ್ತಿರುವುದು ಸರಕಾರದ ಆದೇಶ ಉಲ್ಲಂಘನೆ ಮಾಡುತ್ತಿವೆ.
ಕೃಷಿ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ ಬೆಂಗಳೂರು ಇವರು ಓದಿತು (1) ರ ಆದೇಶದಡಿ ಬೆಳಗಾವಿ ತಾಲೂಕಿನ 8 677,678,679/1,680/1,686/1,686/2,696,697/2,692/1 क 698/2 4 ಮೆ.ಜೈ ಕಿಸಾನ್ ಹೋಲ್ ನೇಲ್ ವೆಜಿಟೇಬಲ್ ಮರ್ಚಂಟ್ಸ್ ಅಸೋಸಿಯೇಷನ್ ಬೆಳಗಾವಿ ಇವರಿಗೆ ಸಂ.ಡಿಎಎಂ/ಆರ್ ಬಿ ಎನ್/ಪಿಎಂವೈ/01/2021-22 ದಿ:16-11-2021 ರಲ್ಲಿ ಖಾಸಗಿ ಮಾರುಕಟ್ಟೆ ನಡೆಸಲು ಮಂಜೂರ ಮಾಡಿದ ಲೈಸೆನ್ಸ್ ನ್ನು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966 ರ ಕಲಂ 72 ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶಿಸಿರುತ್ತಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬೆಳಗಾವಿ ಇವರು ಓದಿತು (2) ರಡಿ ನಿರ್ದೇಶಕರು ಕೃಷಿ ಮಾರಾಟ ಇಲಾಖೆ ಬೆಂಗಳೂರು ಇವರ ಓದಿತು (1) ರ ಆದೇಶದನ್ವಯ ಖಾಸಗಿ ಮಾರುಕಟ್ಟೆ ಲೈಸೆನ್ನ ರದ್ದಾಗಿರುವದರಿಂದ ಆ ಸ್ಥಳದಲ್ಲಿ ತರಕಾರಿ ವ್ಯಾಪಾರ ಮಾಡುವದು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ & ಅಭಿವೃದ್ಧಿ) ಅಧಿನಿಯಮ 1966 ರ ಕಲಂ 8 ರ ಉಲ್ಲಂಘನೆಯಾಗುತ್ತದೆ ಎಂದು ಆದೇಶದಲ್ಲಿದ್ದರೂ ಅದು ಉಲ್ಲಂಘನೆ ಮಾಡುತ್ತಿರುವ ಖಾಸಗಿ ಮಾರುಕಟ್ಟೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರಾಜಕುಮಾರ ಟೋಪಣ್ಣವರ, ಸಾಮಾಜಿಕ ಹೋರಾಟಗಾರ ಸುಜೀತ್ ಮುಳಗುಂದ, ಹೈಕೋರ್ಟ್ ನ್ಯಾಯವಾದಿ ನಿತನ್ ಬೊಳಬಂದಿ ನಗರ ಪೊಲೀಸ ಆಯುಕ್ತರಿಗೆ ದೂರು ನೀಡಿದ್ದಾರೆ. ಎಪಿಎಂಸಿಯವರು ದೂರು ಕೊಟ್ಟರೆ ಪೊಲೀಸ್ ಭದ್ರತೆ ನೀಡುವುದಾಗಿ ತಿಳಿಸಿದ್ದಾರೆ.
