Monday, November 23, 2026
HomeHubli-Dharwadಉಚಿತ ಕರೋನೇರಿ ಅಂಜಿಯೋಗ್ರಾಫಿಕ್  ಶಿಬಿರ

ಉಚಿತ ಕರೋನೇರಿ ಅಂಜಿಯೋಗ್ರಾಫಿಕ್  ಶಿಬಿರ

ಹುಬ್ಬಳ್ಳಿ. ಸ 22 ಇದೇ ಬರುವ ಸೆಪ್ಟೆಂಬರ 29 ರಂದು ನಡೆಯುವ ವಿಶ್ವ ಹೃದಯ ದಿನದ ಅಂಗವಾಗಿ ಧಾರವಾಡದ ಯುನಿಟಿ ಸುಪರ್ ಸ್ಪೆಷಿಯಾಲಿಟಿ ಆಸ್ಪತ್ರೆ ವತಿಯಿಂದ ದಿ.ಸೆ.22 ರಿಂದ ಅ.04 ರ ವರೆಗೆ ರಿಯಾಯಿತಿ ದರದಲ್ಲಿ ರಕ್ತ ಪರೀಕ್ಷೆ, ಇಸಿಜಿ, 2ಡಿ ಇಕೊ, ಟಿಎಂಟಿ, ತಪಾಸಣೆ ಗಳನ್ನು ನುರಿತ ಹೃದಯ ಚಿಕಿತ್ಸಕರ ಸಮಾಲೋಚನೆಯೊಂದಿಗೆ ಎರಡು ವಾರಗಳ ಹೃದಯ ತಪಾಸಣಾ ಶಿಬಿರ ನಡೆಯಲಿದೆ. ಈ ಒಂದು ಶಿಬಿರದಲ್ಲಿ ಆಂಜಿಯೋಗ್ರಾಫಿ ಪರೀಕ್ಷೆಯನ್ನು ಅವಶ್ಯಕತೆ ಇರುವ ರೋಗಿಗಳಿಗೆ ಕೇವಲ ರೂ.5000/- ಗಳಲ್ಲಿ ನಡೆಸಲಾಗುವುದು. ಕಳೆದ 2 ವರ್ಷಗಳಿಂದ ಯುನಿಟಿ ಸುಪರ್ ಸ್ಪೆಷಿಯಾಲಿಟಿ ಆಸ್ಪತ್ರೆ ಈ ಶಿಬಿರವನ್ನು ನಡೆಸುತ್ತಿದ್ದು ಅನೇಕರು ಲಾಭ ಪಡೆದಿದ್ದಾರೆ. ಈ  ಕಾರ್ಯದಲ್ಲಿ ರೋಟರಿ ಕ್ಲಬ್ ಧಾರವಾಡ ಮಿಡ್ ಟೌನ ವತಿಯಿಂದ ಅತ್ಯಂತ ಅವಶ್ಯಕತೆಯಿರುವ 20 ಬಡ ರೋಗಿಗಳಿಗೆ ಉಚಿತವಾಗಿ ಆಂಜಿಯೋಗ್ರಾಫಿ ಪರೀಕ್ಷೆ ನಡೆಸಲಾಗುವುದು. ಸಾರ್ವಜನಿಕರು ಈ ಒಂದು ಶಿಬಿರದ ಸದುಪಯೋಗ ಪಡೆದುಕೊಳ್ಳ ಬೇಕೆಂದು ಡಾ.ಚೌಡಪ್ಪ ಶಾಕಾಪೂರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ರೋಟರಿ ಕಲ್ಫ್ ಧಾರವಾಡ ಮಿಡ್ ಟೌನ ಅಧ್ಯಕ್ಷ ಗೋವರ್ಧನ ಭಟ್,  ಕಲ್ಸ್ ನ ಅಸಿಸ್ಟಂಟ್ ಗೌರ್ನರ್ ಹರ್ಷ ತುರಮರಿ ಇದ್ದರು.

CONTACT FOR REGISTRATION:- 9480552765, 6364596893, 6366608540, 8147266101. 6364590586.

Total Views 58
RELATED ARTICLES

Most Popular

Recent Comments

KNN City News
Home
E-Paper