Monday, November 23, 2026
HomeBelagaviಬಸವಣ್ಣ ಸ್ವತಃ ಶಿವನ ಭಕ್ತ: ಯತ್ನಾಳ‌ ಹೊಸ ಬಾಂಬ್

ಬಸವಣ್ಣ ಸ್ವತಃ ಶಿವನ ಭಕ್ತ: ಯತ್ನಾಳ‌ ಹೊಸ ಬಾಂಬ್

ಬೆಳಗಾವಿ
ಲಿಂಗಾಯತ ಧರ್ಮವನ್ನು ಬವಣ್ಣನವರು ಮಾಡಿದ್ದಾರೆ ಎನ್ನುವ ದಾಖಲೆ ಎಲ್ಲಿವೆ ? ಕೆಲವೊಂದು ಸ್ವಾಮೀಜಿಗಳು, ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತೊಮ್ಮೆ ಬಾಂಬ್ ಸಿಡಿಸಿದರು‌.
ಬುಧವಾ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬಸವಣ್ಣನವರ ನಮ್ಮ ಜಿಲ್ಲೆಯವರು. ಅವರಿಗೆ ಯಾವ ರೀತಿ ಜನರು ನಡೆದುಕೊಂಡರು ಎನ್ನುವುದು ಮನೆ ಮನೆಗೆ ಗೊತ್ತಿದೆ. ಹಿಂದೂ‌ ಧರ್ಮಕ್ಕೆ‌ ಬಸವಣ್ಣ ಬೈದಿಲ್ಲ. ಮೂರ್ತಿ ಪೂಜೆ ಮಾಡುವುದು ಹಿಂದೂಗಳ ಧರ್ಮದಲ್ಲಿದೆ. ಬಸವಣ್ಣನವರ ಸ್ವತಃ ಶಿವನ ಭಕ್ತರಿದ್ದರು‌. ಬಸವಣ್ಣನವರ ವಚನದ ಸಾಲಿನಲ್ಲಿ ಕೂಡಲಸಂಗಮ ದೇವ ಎಂದು ಇದೆ. ಕೆಲವೊಂದು ನಾಸ್ತಿಕ ಸ್ವಾಮೀಜಿಗಳು ಕಮ್ಯೂನಿಸ್ಟ್‌ ‌ಮೈಡೆಂಡ್ ಇರುವ ಸ್ವಾಮೀಜಿಗಳು ಬಸವಣ್ಣನವರನ್ನು ತಮ್ಮ ಮನೆಯ ಆಸ್ತಿ ಎಂದು ಮಾಡಿಕೊಂಡಿದ್ದಾರೆ. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲ. ವಿರೋಧಿಗಳು ಹೊಯ್ಕೊತ್ತ ಹೊಗ್ತಿರತ್ತಾರೆ. ನಾವು ಹಂಗೆ ಹೋಗುವರೆ ಎಂದರು.
ದೇಶದಲ್ಲಿ ಕೇವಲ ಆರು ಧರ್ಮಗಳಿಗೆ ಮಾತ್ರ ಸಂವಿಧಾನದಲ್ಲಿ ಮಾನ್ಯತೆ ಇದೆ. ಲಿಂಗಾಯತ ವೀರಶೈವ ಭಾರತದ ಸಂವಿಧಾನದಲ್ಲಿ ಮಾನ್ಯತೆ ಇಲ್ಲ. ದಲಿತರು ಸೇರಿದಂತೆ ಎಲ್ಲಾ ಸಮುದಾಯದವರು ಹಿಂದೂ ಬರೆಸುತ್ತಿದ್ದಾರೆ. ಯಾಕೆಂದರೆ ಹಿಂದೂ ಎಂದು ಬರೆಸದಿದ್ದರೆ ನಮಗೆ ಸಿಗುವ ಸೌಲಭ್ಯಗಳು ಸಿಗುವುದಿಲ್ಲ. ಲಿಂಗಾಯತ ವೀರಶೈವ ಧರ್ಮನೇ ಇಲ್ಲ. ಎಲ್ಲಿಯವರೆಗೆ ಕೇಂದ್ರ ಸರಕಾರ ಅನುಮೋದನೆ ಕೊಡುತ್ತದೆಯೋ ಅಲ್ಲಿಯವರೆಗೆ ಸೂಕ್ತವಲ್ಲ ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬೇಕು. ನಮ್ಮ ಜನಪ್ರತಿನಿಧಿಗಳು ಗಟ್ಟಿಯಾಗಿ ಮಾತನಾಡಿದ್ದರೆ ನಮಗೊಂದು ಶಕ್ತಿ ಇರುತ್ತಿತ್ತು‌. ನಾವು ಯಾರೂ ಆಗ ದಿ. ಉಮೇಶ ಕತ್ತಿ ಅವರಿಗೆ ಬೆಂಬಲ ಕೊಡಲಿಲ್ಲ. ಯಾವಾಗಲು ರಾಜಕಾರಣದ ವ್ಯವಸ್ಥೆಯಲ್ಲಿ ಬೇಡಿಕೆ ಹಾಗೂ ಅನ್ಯಾಯವನ್ನು ವೇದಿಕೆಯಲ್ಲಿ ಮಾತನಾಡಿದರೆ ನ್ಯಾಯ ಸಿಗುತ್ತದೆ ಎನ್ನುವುದಕ್ಕೆ ಉಮೇಶ ಕತ್ತಿ ಅವರು ನಮಗೆ ಮಾದರಿಯಾಗಿದ್ದಾರೆ ಎಂದರು.
ಒಬ್ಬ ದೊಡ್ಡದ ಮರ ಬಿದ್ದ ಹೋದ ಮೇಲೆ ಒಂದು ರೀತಿ ಭೂಕಂಪ ಆಗುತ್ತದೆ ಎನ್ನುತ್ತಾರೆ. ಅದೇ ರೀತಿ ಉಮೇಶ ಕತ್ತಿ ಅವರ ಸಮಾವೇಶ ಮಾಡಿ ಉತ್ತರ ಕರ್ನಾಟಕದಲ್ಲಿ ರಾಜಕೀಯ ತಿರುವು ಕೊಡುವ ಸಮಾವೇಶ ಮಾಡಿದ್ದೇವೆ. ನಾವು ಯಾವಾಗಲು ಉಮೇಶ ಕತ್ತಿ ಅವರ ಕುಟುಂಬದ ಪರವಾಗಿದ್ದೇವೆ ಎಂದರು.

Total Views 90
RELATED ARTICLES

Most Popular

Recent Comments

KNN City News
Home
E-Paper