Monday, November 23, 2026
HomeBelagaviಒಬ್ಬ ಭ್ರಷ್ಟ ಹೋಗಿ ಮತ್ತೊಬ್ಬ ಬಂದರೆ ರಾಜ್ಯಕ್ಕೆ ಒಳ್ಳೆಯದಾಗಲ್ಲ: ರವಿ

ಒಬ್ಬ ಭ್ರಷ್ಟ ಹೋಗಿ ಮತ್ತೊಬ್ಬ ಬಂದರೆ ರಾಜ್ಯಕ್ಕೆ ಒಳ್ಳೆಯದಾಗಲ್ಲ: ರವಿ

ಬೆಳಗಾವಿ
ಒಬ್ಬ ಭ್ರಷ್ಟ ಹೋಗಿ ಮತ್ತೊಬ್ಬ ಭ್ರಷ್ಟ ಬಂದರೆ ರಾಜ್ಯಕ್ಕೆ ಒಳ್ಳೆಯದಾಗಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಶುಕ್ರವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರುಬೆಳಗಾವಿ, ವಿಜಯಪುರ, ರಾಯಚೂರು, ಬೀದರ್, ಕಲಬುರಗಿಯಲ್ಲಿ ಹಾನಿಯಾಗಿದೆ. ಈ ಜಿಲ್ಲೆಗಳಲ್ಲಿ ಅತೀವೃಷ್ಟಿಯಿಂದ ಸಂಕಷ್ಟಕ್ಕೆ‌ ಸಿಲುಕಿ ರೈತರು ಲಕ್ಷಾಂತರ ಬೆಳೆ ಹಾನಿಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಸರ್ಕಾರ ಮತ್ತು ಮಂತ್ರಿ ಸಂವೇದನೆ ಕಳೆದುಕೊಂಡಿದ್ದಾರೆ ಎಂದರು.
ಬೆಳಗಾವಿ ಜಿಲ್ಲೆಯ ರೈತರಿಗೆ ಚುನಾವಣೆ ಪ್ರತಿಷ್ಠೆ ಮುಖ್ಯವಾಗಿದೆ. ಜನರ ಸಂಕಷ್ಟ ಕೇಳುವ ಸಂವೇದನೆ ಅವರಿಗೆ ಇರಲಿಲ್ಲ. ಈಗಲಾದರೂ ಜಿಲ್ಲೆಯ ಸಚಿವರು ಸಂವೇದನೆ ತೋರಿಸಿ ಎಂದರು.
ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ನಾನು ಮುಖ್ಯಮಂತ್ರಿ ಶುರುವಾಗಿದೆ. ನೀವು ಯಾರು ಮುಖ್ಯಮಂತ್ರಿ ಅನ್ನೋದು ಮುಖ್ಯವಲ್ಲ. ಜನ ಅಧಿಕಾರ ಕೊಟ್ಟಿದ್ದಾರೆ ಅವರ ಸಂಕಷ್ಟಕ್ಕೆ ಸ್ಪಂದಿಸಿ ಎಂದರು.
ಇನ್ನೇರಡು ವರ್ಷ ನಾನೇ ಮುಖ್ಯಮಂತ್ರಿ ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಭ್ರಷ್ಟಾಚಾರಕ್ಕಾ ನೀವು ಮುಖ್ಯಮಂತ್ರಿ ಆಗಿದ್ದು. ಗುತ್ತಿಗೆದಾರರು ಪತ್ರ ಬರೆದಿದ್ದಾರೆ ಓದಿ ನಾಚಿಕೆ ಅನಿಸಲಿಲ್ವಾ ನಿಮಗೆ. ಭ್ರಷ್ಟಾಚಾರ ಡಬಲ್ ಆಗಿದೆ ಅಂತಾ ಬರೆದಿದ್ದಾರೆ. ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನೀವು ಬಂದ ಮೇಲೆ ಅರವತ್ತು ವಸ್ತುಗಳ ಬೆಲೆ ಏರಿಕೆ ಮಾಡಿದೀರಿ ಪಟ್ಟಿ ಕೊಡಬೇಕಾ ಎಂದರು.
ಇವತ್ತಿನ ಪರಿಸ್ಥಿತಿ ನೋಡಿದ್ದರೆ ಮುಖ್ಯಮಂತ್ರಿ ಬದಲಾವಣೆ ಪರಿಸ್ಥಿತಿ ಸುಧಾರಿಸಲ್ಲ. ಸರ್ಕಾರ ಬದಲಾದರೆ ಮಾತ್ರ ಸುಧಾರಿಸಬೇಕು. ಅವನು ಬಂದ್ರೂ ಭ್ರಷ್ಟಾಚಾರ ಮಾಡುತ್ತಾನೆ. ಇವನು ಬಂದರೂ ಭ್ರಷ್ಟಾಚಾರ ಮಾಡುತ್ತಾರೆ. ಕಣ್ಣಿದು ಕುರುಡಾಗಿ, ಕಿವಿ ಇದ್ದು ಕುರುಡಾಗಿದೆ ಸರ್ಕಾರ ಎಂದರು.
ಎರಡು ತಿಂಗಳಿಂದ ಇಲ್ಲಿನ ಸಚಿವರಿಗೆ ಚುನಾವಣೆ ದೊಡ್ಡದಾಗಿದೆ.
ಚುನಾವಣೆ ಬಗ್ಗೆ ನಿರ್ಲಕ್ಷ್ಯ ವಹಿಸಿ ಅಂತಾ ಹೇಳುತ್ತಿಲ್ಲ ಎಂದರು.
ನಾಳೆ ಸಿಎಂ ಅವರಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ವಿಚಾರಕ್ಕೆ ಉತ್ತರಿಸಿದ ಅವರು, ನಿಮಗೆ ಉದ್ಘಾಟನೆ ಮಾಡಲು ತಪ್ಪು ಅಂತಿಲ್ಲ ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿ. ಸಂಕಷ್ಟಕ್ಕೆ ಸ್ಪಂದಿಸುವುದಕ್ಕಿಂತ ಸಂಭ್ರಮಿಸುವುದು ಮುಖ್ಯ ನಿಮಗೆ. ನಮ್ಮ ಕಳಕಳಿ ಇರೋದು ಬೆಲೆ ಏರಿಕೆ, ಹಿಂದೂತ್ವ ಉಳಿವಿಕೆ ಬಗ್ಗೆ ಎಂದರು.
ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ದುರ್ಬಲ ಆಗಿರೋದು ಸಂಕೇತ. ಮೊದಲು ಹೈಕಮಾಂಡ್ ತೀರ್ಮಾನ ಮಾಡುತ್ತೆ ಅಂತಾ ಹೇಳ್ತಿದ್ದರು. ಈಗ ನಾನೇ ನಾನೇ ಸಿಎಂ ಅಂತಾ ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರು ಹೈಕಮಾಂಡ್ ಸೆಡ್ಡು ಹೊಡೆದಿದ್ದಾರೆ. ಮೊದಲು ನಾನೇ ಎನ್ನುವರ ಮೇಲೆ ಕ್ರಮ ಆಗುತ್ತಿತ್ತು. ಯಾರು ಮುಖ್ಯಮಂತ್ರಿ ಆದರೆ ಒಳ್ಳೆದಾಗುತ್ತೆ ಅನ್ನೋ ವಿಶ್ವಾಸ ಇಲ್ಲ ಎಂದರು.

Total Views 110
RELATED ARTICLES

Most Popular

Recent Comments

KNN City News
Home
E-Paper