
ಮೂಡಲಗಿ
ಮಂಚದ ಪೆಟ್ಟಿಗೆಯಲ್ಲಿ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬುಧವಾರ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದ ಮಡ್ಡಿ ಪ್ಲಾಟ್ ದ ನಿವಾಸಿ ಆಕಾಶ್ ಸದಾಶಿವ ಕಂಬಾರ (20) ಎಂಬಾತ ತನ್ನ ಪತ್ನಿ ಸಾಕ್ಷಿಯನ್ನು ಕೊಂದು ಹೆಂಡತಿಯ ಶವವನ್ನು ಮಂಚದ ಕೆಳಗೆ ಇರುವ ಪೆಟ್ಟಿಗೆಯಲ್ಲಿ ಬಚ್ಚಿಟ್ಟು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಬುಧುವಾರ ಸಂಜೆ ಊರಿಗೆ ಹೋಗಿದ್ದ ಆಕಾಶನ ತಾಯಿ ಮನೆಗೆ ಬಂದ ವೇಳೆ ಮನೆಯಲ್ಲಿ ದುರ್ವಾಸನೆ ಬರುತ್ತಿರುವ ಹಿನ್ನೆಲೆ ಮಂಚದ ಕೆಳಗೆ ಇರುವ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಶವ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಗೋಕಾಕ್ ಡಿವೈಎಸ್ಪಿ ರವಿ ನಾಯಕ ಹಾಗೂ ಸಿಪಿಐ ಶ್ರೀಶೈಲ್ ಬ್ಯಾಕೂಡ, ಪಿಎಸ್ಐ ರಾಜು ಪೂಜೇರಿ ಭೇಟಿ ಪರಿಶೀಲನೆ ಮಾಡಿ ಆರೋಪಿಗಾಗಿ ಶೋಧ ಕಾರ್ಯಾಚರಣೆ ಮಾಡಿದ್ದಾರೆ.
ಸಾಕ್ಷಿ ಸಾವಿನ ಸುತ್ತಾ ಅನುಮಾನದ ಹುತ್ತ : ಕೆಳದ ಮೇ ತಿಂಗಳ 24 ರಂದು ಆಕಾಶ್ ಮತ್ತು ಸಾಕ್ಷಿ ಮದುವೆಯಾಗಿದ್ದರು. ಮನೆಯಲ್ಲಿ ಅತ್ತೆ ಮಾವ ಆಕಾಶ್ ಮತ್ತು ಸಾಕ್ಷಿ ವಾಸವಿದ್ದರು. ಸಾಕ್ಷಿ ಅತ್ತೆ ಊರಿಗೆ ಹೋಗಿರುವುದಾಗಿ ಪೊಲೀಸ್ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾಳೆ. ಮನೆಯಲ್ಲಿ ಮಾವ ಸದಾಶಿವ ಹಾಗೂ ಮೃತಳ ಪತಿ ಆಕಾಶ್ ಮನೆಯಲ್ಲಿ ಇದ್ದರು ಆದರೆ ಸಾಕ್ಷಿ ದೇಹ ದುರ್ವಾಸನೆ ಬರುವವರೆಗೂ ಮಾವ ಸದಾಶಿವ ಏನು ಮಾಡುತ್ತಿದ್ದ ಎಂಬ ಪ್ರಶ್ನೆ ಯಕ್ಷಪ್ರಶ್ನೆಯಾಗಿದೆ. ಇನ್ನೊಂದೆಡೆ ಮೃತಾಳ ಕುಟುಂಬಸ್ಥರು ವರದಕ್ಷಣೆಗಾಗಿ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಸ್ಥಳ ಭೇಟಿಗೆ ಬಂದಿದ್ದ ತಹಶೀಲ್ದಾರ್ ಶ್ರೀಶೈಲ್ ಗುಡುಮೆ ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ಘಟನೆ ಜರುಗಿತು. ಕೊಲೆ ಮಾಡಿದ ಆಕಾಶ್ ಮಂಗಳವಾರ ಸಂಜೆ ಊರಲ್ಲೇ ಇದ್ದ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ ಹಾಗಾಗಿ ಸಾಕ್ಷಿ ಸಾವಿನ ಸುತ್ತಾ ಅನುಮಾನದ ಸೂತ್ರಗಳು ಹುಟ್ಟಿಕೊಂಡಿವೆ. ಹಾಗಾಗಿ ಸಾಕ್ಷಿ ಕೊಲೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದಲೇ ತಿಳಿಯಬೇಕಾಗಿದೆ.
