Friday, November 20, 2026
HomeBelagaviಅರಣ್ಯ ಪ್ರದೇಶ ಲೂಟಿ ಹೊಡೆಯಲು ಯತ್ನಿಸಿದ ಬಿಜೆಪಿ ಶಾಸಕ ಯಾರು ?

ಅರಣ್ಯ ಪ್ರದೇಶ ಲೂಟಿ ಹೊಡೆಯಲು ಯತ್ನಿಸಿದ ಬಿಜೆಪಿ ಶಾಸಕ ಯಾರು ?

ಬೆಳಗಾವಿ

ದಟ್ಟವಾದ ಅರಣ್ಯ ಪ್ರದೇಶದಲ್ಲಿ ಬಿಜೆಪಿ ಶಾಸಕನಿಂದ ಖಾನಾಪುರ ತಾಲೂಕನ ಅಕ್ರಮ ಗಣಿಗಾರಿಕೆ ನಡೆಸಿರುವ
ಖಾನಾಪುರ ತಾಲೂಕಿನ ಸುರೇಶ್ ಕಲ್ಲಪ್ಪ ಮಾಕಾವಿಯ ಹೆಸರಿನಲ್ಲಿ ಅಮಟೆ ಗ್ರಾಮದಲ್ಲಿ 146.2 ಎಕರೆ ಹಾಗೂ ಕಾಲಮನಿ ಗ್ರಾಮದಲ್ಲಿ 79.34 ಎಕರೆ ಅರಣ್ಯ ಪ್ರದೇಶದಲ್ಲಿ ಬಾಕ್ಸೈಟ್ ಖನಿಜ ತೆಗೆಯಲು ಅನುಮತಿ ಪಡೆಯಲು ಹುನ್ನಾರ ನಡೆಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಖನಿಜ ಇಲಾಖೆಯ ನಿರ್ದೇಶಕರು, ಬೆಳಗಾವಿ ಅರಣ್ಯ ಇಲಾಖೆಗೆ ಅನುಮತಿ ಪಡೆಯಲು ಪತ್ರಬರೆದಿದ್ದರು. ಆ ಪತ್ರದಲ್ಲಿ 9 ಷರತ್ತುಗಳು ಅರ್ಜಿದಾರರಿಗೆ ಅನುಕೂಲವಾಗಲು ಬೆಳಗಾವಿ ಡಿಎಫ್ಓಗೆ ಪತ್ರ ಬರೆದರು. ಬೆಳಗಾವಿ ಡಿಎಫ್ಓ ಕಣಕುಂಬಿ ಆರ್ ಎಫ್ ಓ ಗೆ ಅದರ ಬಗ್ಗೆ ಪರಿಶೀಲನೆ ಮಾಡಲು ಆದೇಶ ನೀಡಿದರು.
ಬೆಳಗಾವಿ ಬಿಜೆಪಿ ಶಾಸಕನೊಬ್ಬ ಕಣಕುಂಬಿ ಆರ್ ಎಫ್ಓ ಮೇಲೆ ಒತ್ತಡ ಹಾಕಿ ಅರ್ಜಿದಾರರ ಪರವಾಗಿ ವರದಿ ಸಲ್ಲಿಸುವಂತೆ ಮೌಖಿಕ ಒತ್ತಡ ಹೇರಿದರು‌.
ಬಿಜೆಪಿ ಶಾಸಕನ ಒತ್ತಡದ ಮೇಲೆ ಕಣಕುಂಬಿ ಆರ್ ಎಫ್ಓ ಕಾನೂನು ಉಲ್ಲಂಘನೆ ಮಾಡಿ ತಪ್ಪು ವರದಿಯನ್ನು ಸಲ್ಲಿಸಿದ್ದಾರೆ.
ಅಮಟೆ ಮತ್ತು ಕಾಲಮನಿ ಗ್ರಾಮ ಖಾನಾಪುರ ತಾಲೂಕಿನ ಅತೀ ದಟ್ಟ ಅರಣ್ಯ ಪ್ರದೇಶದಲ್ಲಿ ಇರುವ ಕಾರಣಕ್ಕೆ ಅಲ್ಲಿ ದಾಂಡೇಲಿ ಅಭಿಯಾರಣ್ಯದಿಂದ ಕಾಳಿ ಟೈಗರ್ ರಿಸರ್ವ್ ದಿಂದ ತಿಲಾರಿ ಕಾಡಿನಲ್ಲಿ ಆನೆಗಳು ಹೋಗಲು ಇದು ಕಾರಿಡಾರ‌. ಅಲ್ಲದೆ ಈ ಪ್ರದೇಶ ಟೈಗರ್ ಕಾರಿಡಾರ್ ನಿಂದ 700 ಮೀಟರ್ ಸಮೀಪ ಇದೆ. ಇದು ನೈಸರ್ಗಿಕವಾದ ಪರಿಸರ. ಇಲ್ಲಿ ಇಳಿಜಾರು ಇರುವುದರಿಂದ ಗಣಿಗಾರಿಕೆ ಮಾಡಲು ಅನುಮತಿ ಸಿಕ್ಕರೆ ಮಣ್ಣಿನ ಕೊರತೆಯಾಗುತ್ತದೆ. ಅಲ್ಲದೆ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ತಪ್ಪು ವರದಿ ನೀಡಿರುವ ಕಾರಣದಿಂದ ಇದರ ಬಗ್ಗೆ ಹಿಂದಿನ ಡಿಎಫ್ಓ ಈ ವರದಿ ತಿರಸ್ಕರಿಸಿ ಸರಕಾರಕ್ಕೆ ವರದಿ ಸಲ್ಲಿಸಿದರು‌. ಈಗ ಮತ್ತೊಮ್ಮೆ ಇಲ್ಲಿನ ನಿರ್ದೇಶಕರು ಅನುಮತಿ ಕೊಡಲು ಪತ್ರ ಬರೆದಿರುವ ಈ ವಿಷಯ ಬೆಳಗಾವಿ ಹೊಸ ಡಿಎಫ್ಓ ವರದಿಯ ಆಧಾರದ ಮೇಲೆ ನಿಂತಿದೆ.
ಅರಣ್ಯ ಸಂಪತ್ತನ್ನು ಲೂಟಿ ಮಾಡಿ ವಜ್ಯ ಜೀವಿಗಳಿಗೆ ತೊಂದರೆ ನೀಡುವ ದುರುದ್ದೇಶದಿಂದ ಬೆಳಗಾವಿಯ ಬಿಜೆಪಿ ಶಾಸಕ ಪರಿಸರದ ಜೊತೆಗೆ ಚೆಲ್ಲಾಟವಾಡುತ್ತಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ‌.

Total Views 388
RELATED ARTICLES

Most Popular

Recent Comments

KNN City News
Home
E-Paper