Monday, November 23, 2026
HomeBelagavi50 ಕೋಟಿ ಬೆಟ್ಟಿಂಗ್ ಕಟ್ಟುತ್ತೇನೆ ನಮ್ಮವರೇ ಅಧ್ಯಕ್ಷರಾಗ್ತಾರೆ: ಬಾಲಚಂದ್ರ ಸವಾಲ್

50 ಕೋಟಿ ಬೆಟ್ಟಿಂಗ್ ಕಟ್ಟುತ್ತೇನೆ ನಮ್ಮವರೇ ಅಧ್ಯಕ್ಷರಾಗ್ತಾರೆ: ಬಾಲಚಂದ್ರ ಸವಾಲ್

ಬೆಳಗಾವಿ
29ವರ್ಷದ ನಂತರ ಮತ್ತೆ ಪೂರ್ಣ ಪ್ರಮಾಣದ ಅಧಿಕಾರ ನಮಗೆ ಸಿಕ್ಕಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ನಮ್ಮವರೇ ಆಗುತ್ತಾರೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಭಾನುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿ ಸಾರಿ ಒಂದು, ಎರಡು ಸೀಟ್ ಗೆದ್ದವರನ್ನು ನಾವು ಅಧ್ಯಕ್ಷ ಮಾಡುತ್ತಾ ಹೋಗಿದ್ದೇವು. ಅಧ್ಯಕ್ಷ, ಉಪಾಧ್ಯಕ್ಷ, ಅಪೆಕ್ಸ್ ಬ್ಯಾಂಕ್ ಡೈರೆಕ್ಟರ್ ನಮ್ಮವರನ್ನು ಮಾಡಿದ್ದೇವೆ. 16 ಸ್ಥಾನಗಳ ಪೈಕಿ 13 ಸ್ಥಾನ ಗೆದಿದ್ದೇವೆ. ನಮ್ಮಲ್ಲಿ ಸ್ವಲ್ಪ ಅಸಮಾಧಾನ ಇದ್ದವು ಅವನ್ನು ಸರಿ ಮಾಡಿಕೊಳುತ್ತೇವೆ ಎಂದರು.
ನಾವು ಇದ್ದರೆ ಡಿಸಿಸಿ ಬ್ಯಾಂಕ್ ಇರುತ್ತದೆ ಎನ್ನುತ್ತಿದ್ದರು. ಅಂತವರಿಗೆ ಬ್ಯಾಂಕ್ ಸದೃಢ ಮಾಡಿ ಉತ್ತರ ಕೊಡುತ್ತೇವೆ ಎಂದು ಸವದಿ- ಕತ್ತಿ ಹೆಸರು ಹೇಳದೆ ಪ್ರತ್ಯುತ್ತರ ನೀಡಿದರು.
ರಾಜು ಕಾಗೆ, ಗಣೇಶ್ ಹುಕ್ಕೇರಿ ನಮ್ಮ ಬಣಕ್ಕೆ ಸಪೋರ್ಟ್ ಮಾಡುತ್ತೇವೆ ಎಂದಿದ್ದಾರೆ. ಡಿಸಿಸಿ ಬ್ಯಾಂಕ್ ನಲ್ಲಿ ಮೂರು ಜನ ಮಾತ್ರ ವಿರೋಧ ಇದೆ. ಈಗಾಗಲೇ ಘೋಷಣೆ ಮಾಡಿದ ಹಾಗೆ ಲಿಂಗಾಯತ ಸಮಾಜದವರನ್ನು ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಚುನಾವಣೆ ಸಮಯದಲ್ಲಿ ಸಿಕ್ಕಾಪಟ್ಟೆ ಮಾತಾಡಿದರೂ ಬ್ಯಾಂಕ್ ಮೇಲೆ ಪರಿಣಾಮ ಬೀರಬಾರದು ಎಂದು ನಾವು ಮಾತಾಡಿಲ್ಲ ಎಂದರು.
ನಾವು ಸುಮ್ಮನೆ ಇದೀವಿ ಅಂದ್ದರೆ ನಮ್ಮ ವಿಕ್ನೆಸ್ ಅಲ್ಲಾ. ಸಮಯ ಬಂದಾಗ ಎಲ್ಲರಿಗೂ ಉತ್ತರ ಕೊಡುತ್ತೇನೆ. ನಾನು ಐವತ್ತು ಕೋಟಿ ಬೆಟ್ಟಿಂಗ್ ಕಟ್ಟುತ್ತೇನೆ. ನಮ್ಮವರೇ ಅಧ್ಯಕ್ಷರಾಗುತ್ತಾರೆ. ಲಕ್ಷ್ಮಣ ಸವದಿ ಬೇಕಾದರೆ ಐವತ್ತು ಕೋಟಿ ಬೆಟ್ಟಿಂಗ್ ಕಟ್ಟಲಿ. ನಮ್ಮವರು ಆಗದಿದ್ದರೆ ಆಸ್ತಿ ಮಾರಿ ಐವತ್ತು ಕೋಟಿ ಕೊಡುತ್ತೇನೆ ಎಂದು ಸವಾಲ್ ಹಾಕಿದರು.
ಘಟಪ್ರಭಾ ಸಕ್ಕರೆ ಕಾರ್ಖಾನೆಯದ್ದು 33ಕೋಟಿ ಬಾಕಿ ಇದೆ. ಅದನ್ನು ಒನ್ ಟೈಮ್ ಸೆಟ್ಲಮೆಂಟ್ ಮಾಡಿ ಸಾಲ ವಸೂಲಿ ಶುರು ಮಾಡುತ್ತೇನೆ. ಬಹಳಷ್ಟು ಜನ ನಮ್ಮನ್ನು ಭೇಟಿಯಾಗಿ ಹೋಗುತ್ತಾರೆ. ಅದನ್ನೆಲ್ಲಾ ನಾವು ಹೊರಗೆ ಹೇಳಲು ಆಗುವುದಿಲ್ಲ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ನನಗೆ ಯಾರು ಶತ್ರುಗಳಿಲ್ಲ. ಲಕ್ಷ್ಮಣ ಸವದಿಗೂ ನಮಗೂ ವೈಯಕ್ತಿಕವಾಗಿ ಎನೂ ಇಲ್ಲಾ. ಅವಿರೋಧವಾಗಿ ಆಯ್ಕೆಯಾಗಬೇಕು ಅಂದುಕೊಂಡಿದ್ದರು.ವಅದು ಆಗದಿದ್ದಕ್ಕೆ ಸ್ವಲ್ಪ ಅಸಮಾಧಾನ ಆಗಿದ್ದಾರೆ ಎಂದರು.

Total Views 179
RELATED ARTICLES

Most Popular

Recent Comments

KNN City News
Home
E-Paper