Monday, November 23, 2026
HomeBelagaviಕಬ್ಬಿಗೆ ದರ ಕೊಡುವುದು ನಮ್ಮ ಕೈಯಲ್ಲಿ ಇಲ್ಲ: ಸಚಿವ ಪಾಟೀಲ್

ಕಬ್ಬಿಗೆ ದರ ಕೊಡುವುದು ನಮ್ಮ ಕೈಯಲ್ಲಿ ಇಲ್ಲ: ಸಚಿವ ಪಾಟೀಲ್

ಬೆಳಗಾವಿ
ನಾಳೆ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಸಿಎಂ ಕರೆದಿದ್ದಾರೆ. ರೈತರಿಗೆ ಸಾಧ್ಯವಾದಷ್ಟು ನೆರವು ಕೊಡುತ್ತೇವೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರೈತರ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಗುರ್ಲಾಪುರ ರೈತರ ಹೋರಾಟ ಸ್ಥಳಕ್ಕೆ ತೆರಳುತ್ತೇನೆ. ನನಗೆ ಯಾವುದೇ ಒತ್ತಡ ಇಲ್ಲ. ರೈತರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ‌ ಸಮಸ್ಯೆ ಒಮ್ಮೇಲೆ ಬ್ಲಾಸ್ಟ್ ಆಗಿದೆ‌. ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲು ಯತ್ನಿಸುತ್ತಿದ್ದೇವೆ ಎಂದರು.
ಕಬ್ಬಿಗೆ ದರ ಕೊಡುವುದು ನಮ್ಮ ಕೈಯಲ್ಲಿ ಇಲ್ಲ. ಕೇಂದ್ರ ಸರಕಾರದ ಕಡೆ ಇದೆ. ದೇಶದ ಸಕ್ಕರೆ ಸಚಿವರು ಕರ್ನಾಟಕ ರಾಜ್ಯದವರಿದ್ದಾರೆ. ಪ್ರಲ್ಹಾದ ‌ಜೋಶಿ ಅವರು ಅವರ ಹೆಸರು ಇಲ್ಲಿಯವರೆಗೂ ಮುಂದೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿನ್ನೆ ಮಾಡಿರುವ ಆರೋಪಕ್ಕೆ ಉತ್ತರ ಕೊಡುಲು ನಾನು ಬಂದಿಲ್ಲ. ಸಮಸ್ಯೆ ಪರಿಹರಿಸಲು ಬಂದಿದ್ದೇನೆ. ರೈತರ ಸಮಸ್ಯೆ ಬಗೆ ಹರಿಸುವುದು ಬಿಜೆಪಿಯವರ ಕೈಯಲ್ಲಿದೆ. ಈಗಲೂ ಅವರ ಕೈಯಲ್ಲಿಯೇ ಇದೆ. ಕಬ್ಬಿಗೆ ಎಫ್ಆರ್ ಪಿ ದರ ನಿಗದಿ ಮಾಡುವುದು ಕೇಂದ್ರ ಸರಕಾರದ ಕಡೆ ಇದೆ. ಕೇಂದ್ರದವರು ದೇಶಕ್ಕೆ ಎಫ್ಆರ್ ಪಿ ದರ ನಿಗದಿ ಮಾಡಬಹುದು. ಆದರೆ ರೈತರ ಬೇಡಿಕೆ ಹೆಚ್ಚಿನದ್ದು ಇದೆ. ಆ ಪ್ರಯತ್ನವನ್ನು ಎಲ್ಲರೂ ಮಾಡುತ್ತೇವೆ ಎಂದರು.

Total Views 84
RELATED ARTICLES

Most Popular

Recent Comments

KNN City News
Home
E-Paper